ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಛತ್ತೀಸಗಢದಲ್ಲಿ 33 ನಕ್ಸಲರು ಶರಣು

Last Updated 15 ಫೆಬ್ರುವರಿ 2023, 13:27 IST
ಅಕ್ಷರ ಗಾತ್ರ

ಸುಕ್ಮಾ, ಛತ್ತೀಸಗಢ: ‘ತಮ್ಮನ್ನು ಹಿಡಿದು ಕೊಟ್ಟವರಿಗೆ ₹ 1 ಲಕ್ಷ ಬಹುಮಾನ ಘೋಷಿಸಲಾಗಿದ್ದ ಮೂವರು ನಕ್ಸಲೀಯರು ಸೇರಿದಂತೆ ಒಟ್ಟು 33 ನಕ್ಸಲೀಯರು ಛತ್ತೀಸಡದ ಸುಕ್ಮಾ ಜಿಲ್ಲೆಯಲ್ಲಿ ಶರಣಾಗಿದ್ದಾರೆ’ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

‘ಸುಕ್ಮಾದ ಡಬ್ಬಮಾರ್ಕ ಕ್ಯಾಂಪ್‌ನಲ್ಲಿ ಮಂಗಳವಾರ ಆಯೋಜಿಸಿದ್ದ ಜನ ದರ್ಶನ ಕಾರ್ಯಕ್ರಮದಲ್ಲಿ ನಕ್ಸಲೀಯರು ಶರಣಾಗಿದ್ದಾರೆ’ ಎಂದು ಪೊಲೀಸ್ ವರಿಷ್ಠಾಧಿಕಾರಿ ಸುನೀಲ್ ಶರ್ಮಾ ಹೇಳಿದ್ದಾರೆ.

‘ಶರಣರಾದವರಲ್ಲಿ ದಂಡಕಾರಣ್ಯ ಆದಿವಾಸಿ ಕಿಸಾನ್ ಮಜ್ದೂರ್ ಸಂಘಟನೆಯ ಅಧ್ಯಕ್ಷ ದಿರ್ದೋ ಮುಡಾ, ಚೇತನಾ ನಾಟ್ಯ ಮಂಮಂಡಳಿಯ (ನಕ್ಸಲರ ಸಾಂಸ್ಕೃತಿಕ ಸಂಘಟನೆ) ಅಧ್ಯಕ್ಷ ಹಿದ್ಮಾ ಮತ್ತು ಸೇನಾ ಕಮಾಂಡರ್ ವಜಮ್ ಹಿದ್ಮಾ ಸೇರಿದ್ದಾರೆ’ ಎಂದು ಅವರು ಹೇಳಿದ್ದಾರೆ.

‘ಶರಣದಾವರೆಲ್ಲ ತಮ್ಮ ನಿಷೇಧಿತ ಸಂಘಟನೆಯ ಪೊಳ್ಳು ಸಿದ್ಧಾಂತದಿಂದ ನಿರಾಶರಾಗಿದ್ದರು. ಆದ್ದರಿಂದ ಸಮಾಜದ ಮುಖ್ಯಮಾಹಿನಿಗೆ ಸೇರಲು ಅವರು ಶಸ್ತ್ರಗಳನ್ನು ತ್ಯಜಿಸಿದ್ದಾರೆ’ ಎಂದೂ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT