ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್‌ ವ್ಯವಸ್ಥೆ ಹ್ಯಾಕ್‌ಗೆ ಯತ್ನಿಸಿದ್ದ ಚೀನೀ ಹ್ಯಾಕರ್‌ಗಳು

Last Updated 3 ಮಾರ್ಚ್ 2021, 19:31 IST
ಅಕ್ಷರ ಗಾತ್ರ

ಹೈದರಾಬಾದ್‌: ಚೀನಾ ಮೂಲದ ಹ್ಯಾಕರ್‌ಗಳ ಗುಂಪು ತೆಲಂಗಾಣ ರಾಜ್ಯದ ವಿದ್ಯುತ್‌ ವ್ಯವಸ್ಥೆಯನ್ನೂ ಹ್ಯಾಕ್‌ ಮಾಡಲು ಪ್ರಯತ್ನಿಸಿತ್ತು. ಆದರೆ ಅವರ ಪ್ರಯತ್ನವನ್ನು ವಿಫಲಗೊಳಿಸಿದ್ದೇವೆ ಎಂದು ಅಧಿಕಾರಿಗಳು ಬುಧವಾರ ಹೇಳಿದ್ದಾರೆ.

ದೇಶದ ಕಂಪ್ಯೂಟರ್‌ ಎಮರ್ಜೆನ್ಸಿ ರೆಸ್ಪಾನ್ಸ್‌ ಟೀಮ್‌ (ಸಿಇಆರ್‌ಟಿ) ನೀಡಿದ ಎಚ್ಚರಿಕೆ ಮೇರೆಗೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

‘ನಾವು ಕೆಲ ಕಂ‌ಪ್ಯೂಟರ್‌ ಪ್ರೋಗ್ರಾಂಗಳನ್ನು ಹಾಳುಗೆಡಹುವ ವೈರಸ್‌ ನುಸುಳುವುದನ್ನು ಗಮನಿಸಿದೆವು. ಕೂಡಲೇ ಅದನ್ನು ಅಳಿಸಿ ಹಾಕಿದೆವು. ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿರುವುದರಿಂದ ಯಾವುದೇ ತೊಂದರೆ ಎದುರಾಗಿಲ್ಲ’ ಎಂದು ಅವರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ರಾಜ್ಯ ಇಂಧನ ಸಂಸ್ಥೆಗಳಿಗೆ ಸಿಇಆರ್‌ಟಿ ಎರಡು ದಿನ ಮುನ್ನವೇ ಈ ಕುರಿತು ಮಾಹಿತಿ ನೀಡಿತ್ತು.

‘ನಾವು ರಾಜ್ಯದಲ್ಲಿ ಉತ್ತಮ ತಂಡವನ್ನು ಹೊಂದಿದ್ದೇವೆ. ಇಲ್ಲಿ ನಿತ್ಯ ಪರಿಶೀಲನೆ ನಡೆಯುತ್ತಿರುತ್ತದೆ. ಅಲ್ಲದೆ ಆ್ಯಂಟಿ ವೈರಸ್‌ ಕೂಡ ಇದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT