ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶ: 43 ಹೊಸ ಕೋವಿಡ್‌ ಪ್ರಕರಣಗಳು

Last Updated 15 ಏಪ್ರಿಲ್ 2022, 12:55 IST
ಅಕ್ಷರ ಗಾತ್ರ

ನೋಯ್ಡಾ (ಪಿಟಿಐ): ಉತ್ತರ ಪ್ರದೇಶದ ಗೌತಮ ನಗರದಲ್ಲಿ 43 ಹೊಸ ಕೋವಿಡ್‌ ಪ್ರಕರಣಗಳು ಪತ್ತೆಯಾಗಿದೆ. ಈ ಪೈಕಿ 16 ಮಕ್ಕಳಲ್ಲಿ ಸೋಂಕು ಇರುವುದು ದೃಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಗುರುವಾರ ಹೇಳಿದೆ.

ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳು 156 ತಲುಪಿದೆ. ಕಳೆದ ಒಂದು ವಾರದಿಂದ ವರದಿಯಾಗುತ್ತಿರುವ ಶೇ 25 ರಷ್ಟು ಪ್ರಕರಣಗಳು ಮಕ್ಕಳಲ್ಲಿ ಕಂಡು ಬಂದಿವೆ ಎಂದೂ ಇಲಾಖೆ ಹೇಳಿದೆ.

‘18 ವರ್ಷಕ್ಕಿಂತ ಕೆಳಗಿನ 16 ಮಕ್ಕಳಲ್ಲಿ ಹೊಸ ಪ್ರಕರಣಗಳು ದೃಢಪಟ್ಟಿವೆ. ಕಳೆದ ಒಂದು ವಾರದಲ್ಲಿ ವರದಿಯಾದ 127 ಹೊಸ ಪ್ರಕರಣಗಳಲ್ಲಿ ಶೇ 26.3 ಅಂದರೆ 44 ಮಕ್ಕಳಲ್ಲಿ ಕಾಣಿಸಿಕೊಂಡಿವೆ’ ಎಂದು ಮುಖ್ಯ ವೈದ್ಯಕೀಯ ಅಧಿಕಾರಿ ಡಾ.ಸುನೀಲ್‌ ಕುಮಾರ್‌ ಶರ್ಮಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT