ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಟ್ಟಿಗೆ 10ನೇ ತರಗತಿ ಪರೀಕ್ಷೆ ಬರೆದ ಅಪ್ಪ – ಮಗ: ಅಪ್ಪ ಪಾಸ್, ಮಗ ಫೇಲ್!

Last Updated 19 ಜೂನ್ 2022, 7:04 IST
ಅಕ್ಷರ ಗಾತ್ರ

ಮುಂಬೈ: ಅಪ್ಪ ಮತ್ತು ಮಗ ಒಟ್ಟಿಗೇ 10ನೇ ತರಗತಿ ಪರೀಕ್ಷೆ ಬರೆದು ಅಪ್ಪ ತೇರ್ಗಡೆಯಾಗಿ ಮಗ ಅನುತ್ತೀರ್ಣನಾದ ಅಪರೂಪದ ವಿದ್ಯಮಾನ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.

ಪುಣೆಯ ಬಾಬಾ ಸಾಹೇಬ್ ಅಂಬೇಡ್ಕರ್ ಡಯಾಸ್ ನಿವಾಸಿ, 43 ವರ್ಷ ವಯಸ್ಸಿನ ಭಾಸ್ಕರ್ ವಾಘ್ಮರೆ ಎಂಬುವವರು ಹಾಗೂ ಅವರ ಮಗ ಸಾಹಿಲ್ ಈ ವರ್ಷ ಮಹಾರಾಷ್ಟ್ರ ಪರೀಕ್ಷಾ ಮಂಡಳಿ ನಡೆಸಿದ 10ನೇ ತರಗತಿ ಪರೀಕ್ಷೆಗೆ ಹಾಜರಾಗಿದ್ದರು. ಶುಕ್ರವಾರ ಫಲಿತಾಂಶ ಪ್ರಕಟವಾದಾಗ ಕುಟುಂಬದವರಿಗೆ ಅಚ್ಚರಿ ಕಾದಿತ್ತು. ಅಪ್ಪ ಪಾಸ್ ಆಗಿದ್ದರೆ ಮಗ ಅನುತ್ತೀರ್ಣ ಆಗಿದ್ದ!

7ನೇ ತರಗತಿ ವರೆಗೆ ಓದಿದ್ದ ಭಾಸ್ಕರ್ ಕುಟುಂಬದ ಜವಾಬ್ದಾರಿ ನಿರ್ವಹಣೆಗಾಗಿ ಶಾಲಾ ಶಿಕ್ಷಣ ತೊರೆದಿದ್ದರು. ಆದರೆ, ಶಿಕ್ಷಣ ಮುಂದುವರಿಸುವ ಬಗ್ಗೆ ಆಸಕ್ತಿ ಹೊಂದಿದ್ದರು. ಸುಮಾರು 30 ವರ್ಷಗಳ ಬಳಿಕ ಮಗನ ಜತೆ 10ನೇ ತರಗತಿ ಪರೀಕ್ಷೆ ಬರೆದಿದ್ದಾರೆ.

‘ನಾನು ಯಾವಾಗಲೂ ಹೆಚ್ಚು ಅಧ್ಯಯನ ನಡೆಸಬೇಕೆಂದು ಬಯಸಿದ್ದೆ. ಕೌಟುಂಬಿಕ ಜವಾಬ್ದಾರಿಗಳ ಕಾರಣದಿಂದಾಗಿ ಸಾಧ್ಯವಾಗಲಿಲ್ಲ’ ಎಂದು ಮಾಧ್ಯಮದವರಿಗೆ ಭಾಸ್ಕರ್ ಪ್ರತಿಕ್ರಿಯೆ ನೀಡಿದ್ದಾರೆ.

‘ಕೆಲವು ಸಮಯದಿಂದ, ನಾನು ಅಧ್ಯಯನವನ್ನು ಪುನರಾರಂಭಿಸಲು ಮತ್ತು ಕೆಲವು ಕೋರ್ಸ್‌ಗಳನ್ನು ಮಾಡಲು ಉತ್ಸುಕನಾಗಿದ್ದೆ. ಅದು ನನಗೆ ಹೆಚ್ಚು ಆದಾಯ ಗಳಿಸಲು ನೆರವಾಗಬಹುದು ಎಂದು ಭಾವಿಸಿದ್ದೆ. ಹೀಗಾಗಿ 10ನೇ ತರಗತಿ ಪರೀಕ್ಷೆ ಬರೆಯಲು ನಿರ್ಧಿಸಿದ್ದೆ. ನನ್ನ ಮಗ ಕೂಡ ಈ ವರ್ಷ 10ನೇ ತರಗತಿ ಪರೀಕ್ಷೆಗೆ ತಯಾರಾಗುತ್ತಿದ್ದ. ಅದೂ ನನಗೆ ನೆರವಾಯಿತು’ ಅವರು ಹೇಳಿದ್ದಾರೆ.

ಪ್ರತಿ ದಿನ ಅಧ್ಯಯನ ಮಾಡುತ್ತಿದ್ದೆ. ದಿನದ ಕೆಲಸ ಮುಗಿದ ಬಳಿಕ ಪರೀಕ್ಷೆಗೆ ತಯಾರಿ ಮಾಡುತ್ತಿದ್ದೆ ಎಂದಿರುವ ಭಾಸ್ಕರ್, ಮಗ ಎರಡು ಪೇಪರ್‌ಗಳಲ್ಲಿ ಅನುತ್ತೀರ್ಣಗೊಂಡಿದ್ದಾನೆ. ಇದರಿಂದ ಬೇಸರವಾಗಿದೆ ಎಂದು ಹೇಳಿದ್ದಾರೆ.

‘ಪೂರಕ ಪರೀಕ್ಷೆ ಬರೆಯಲು ಮಗನಿಗೆ ನೆರವಾಗುತ್ತೇನೆ. ಆತ ಉತ್ತೀರ್ಣನಾಗುವ ವಿಶ್ವಾಸವಿದೆ’ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT