ಶುಕ್ರವಾರ, ಆಗಸ್ಟ್ 12, 2022
20 °C

ಭಾರತೀಯರ ಅಪಹರಣ: ನಾಳೆ ಹಸ್ತಾಂತರ ಸಾಧ್ಯತೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಅರುಣಾಚಲ ಪ್ರದೇಶದ ಸುಭಾನ್‌ಸಿರಿ ಜಿಲ್ಲೆಯ ಗಡಿಭಾಗದಲ್ಲಿ ಏಕಾಏಕಿ ನಾಪತ್ತೆಯಾಗಿದ್ದ ಐವರು ಸ್ಥಳೀಯ ಯುವಕರನ್ನು ಶನಿವಾರ ಭಾರತೀಯ ಅಧಿಕಾರಿಗಳಿಗೆ ಚೀನಾ ಹಸ್ತಾಂತರಿಸುವ ಸಾಧ್ಯತೆ ಇದೆ ಎಂದು ಕೇಂದ್ರ ಸಚಿವ ಕಿರಣ್‌ ರಿಜಿಜು ತಿಳಿಸಿದ್ದಾರೆ. 

ಸೆಪ್ಟೆಂಬರ್‌ 4ರಂದು ಈಯುವಕರು ಕಾಡಿನಲ್ಲಿ ಬೇಟೆಯಾಡಲು ಹೋಗಿದ್ದ ಸಂದರ್ಭದಲ್ಲಿ ನಾಪತ್ತೆಯಾಗಿದ್ದರು. ಯುವಕರ ಜತೆ ಇತರರೂ ಕಾಡಿಗೆ ತೆರಳಿದ್ದರು. ಅವರಲ್ಲಿ ಇಬ್ಬರು ಗ್ರಾಮಕ್ಕೆ ಮರಳಿ, ಚೀನಾ ಸೇನೆ ಯುವಕರನ್ನು ಅಪಹರಿಸಿರುವ ಕುರಿತು ಮಾಹಿತಿ ನೀಡಿದ್ದರು.   

ಯುವಕರು ನಾಪತ್ತೆಯಾದ ವಿಷಯವನ್ನು ಭಾರತೀಯ ಸೇನೆಯು ಹಾಟ್‌ಲೈನ್ ಮೂಲಕ ಚೀನಾ ಸೇನೆಯ ಗಮನಕ್ಕೆ ತಂದಿತ್ತು. ಐವರು ಭಾರತೀಯ ಯುವಕರು ತಮ್ಮ ವಶದಲ್ಲಿರುವುದಾಗಿ ಚೀನಾ ದೃಢಪಡಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು