ಬುಧವಾರ, ಮೇ 12, 2021
18 °C

ಪ್ರತ್ಯೇಕ ಘಟನೆಯಲ್ಲಿ ಕಾಣೆಯಾಗಿದ್ದ ಒಂದೇ ಜಿಲ್ಲೆಯ 56 ಯುವತಿಯರು ಮರಳಿ ಮನೆಗೆ

ಪಿಟಿಐ‌ Updated:

ಅಕ್ಷರ ಗಾತ್ರ : | |

ರಾಯಗಡ: 2020ರಲ್ಲಿ ಮಹಾರಾಷ್ಟ್ರದ ರಾಯಗಡ ಜಿಲ್ಲೆಯಲ್ಲಿ ನಡೆದಿದ್ದ ಪ್ರತ್ಯೇಕ ಘಟನೆಗಳಲ್ಲಿ ನಾಪತ್ತೆಯಾಗಿದ್ದ 56 ಯುವತಿಯರು ಮತ್ತೆ ತಮ್ಮ ಕುಟುಂಬಗಳೊಂದಿಗೆ ಸೇರಿಕೊಂಡಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಇವರನ್ನು ಹೊರತುಪಡಿಸಿ, ಮನೆಯಿಂದ ಓಡಿಹೋಗಿದ್ದ ಕರಾವಳಿ ಜಿಲ್ಲೆಯ 14 ಬಾಲಕರನ್ನು ಪತ್ತೆ ಹಚ್ಚಿ ಮತ್ತೆ ಅವರ ಸಂಬಂಧಿಗಳೊಂದಿಗೆ ಬಿಡಲಾಗಿದೆ ಎಂದು ರಾಯಗಡ ಪೊಲೀಸರು ತಿಳಿಸಿದ್ದಾರೆ.

'2020ರಲ್ಲಿ ಒಟ್ಟು 57 ಯುವತಿಯರು ಜಿಲ್ಲೆಯ ವಿವಿಧ ಭಾಗಗಳಲ್ಲಿರುವ ತಮ್ಮ ಮನೆಗಳಿಂದ ಓಡಿಹೋಗಿದ್ದರು. ಇವರೆಲ್ಲರೂ 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರುವುದರಿಂದ, ಕಾಣೆಯಾದ ವ್ಯಕ್ತಿಗಳ ವರದಿಗಳನ್ನು ದಾಖಲಿಸಲಾಗಿದೆ'. ಅವರಲ್ಲಿ ಹೆಚ್ಚಿನವರು ತಮ್ಮ ಬಾಯ್‌ಫ್ರೆಂಡ್‌ಗಳೊಂದಿಗೆ ಓಡಿಹೋಗಿದ್ದರು ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಕರಣಗಳ ತನಿಖೆಯ ವೇಳೆ ಪೊಲೀಸರು ಅವರಲ್ಲಿ 56 ಮಂದಿಯನ್ನು ಕರೆತಂದು ಅವರ ಕುಟುಂಬಗಳಿಗೆ ಹಸ್ತಾಂತರಿಸಿದ್ದಾರೆ. ಆದರೆ ಓರ್ವ ಯುವತಿಯನ್ನು ಇನ್ನೂ ಪತ್ತೆ ಮಾಡಲಾಗಿಲ್ಲ ಎಂದು ಅವರು ಹೇಳಿದರು.
ಕಳೆದ ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ 230 ಯುವತಿಯರು ನಾಪತ್ತೆಯಾಗಿದ್ದಾರೆ ಎಂದು ಹೇಳಿಕೆ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು