ಶುಕ್ರವಾರ, ಜುಲೈ 1, 2022
28 °C

ಪಾಕ್‌ ಜೈಲಿನಲ್ಲಿ 577 ಭಾರತೀಯ ಮೀನುಗಾರರು: ಸಚಿವ ಮುರಳೀಧರನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಪಾಕಿಸ್ತಾನದ ವಶದಲ್ಲಿ ಎಷ್ಟು ಮಂದಿ ಭಾರತೀಯ ಮೀನುಗಾರರಿದ್ದಾರೆ ಎಂಬ ಮಾಹಿತಿಯನ್ನು ಕೇಂದ್ರ ಸರ್ಕಾರವು ಲೋಕಸಭೆಗೆ ಶುಕ್ರವಾರ ನೀಡಿದೆ. ಅಲ್ಲದೇ, ಮೀನುಗಾರರ ಬಂಧನ ಮತ್ತು ಅವರ ದೋಣಿಗಳನ್ನು ವಶಪಡಿಸಿಕೊಂಡಿರುವ ಘಟನೆಗಳನ್ನು ಭಾರತ ನಿರಂತರವಾಗಿ ಪಾಕಿಸ್ತಾನದೊಂದಿಗೆ ಪ್ರಸ್ತಾಪಿಸುತ್ತಲೇ ಬರುತ್ತಿದೆ ಎಂದು ಸರ್ಕಾರ ಹೇಳಿದೆ.

'ಜನವರಿ 1 ರಂದು ವಿನಿಮಯ ಮಾಡಿಕೊಂಡ ಪಟ್ಟಿಗಳ ಪ್ರಕಾರ, ಭಾರತೀಯರು ಅಥವಾ ಭಾರತೀಯರೆಂದು ನಂಬಲಾದ 577 ಮೀನುಗಾರರನ್ನು ಬಂಧಿಸಿರುವುದಾಗಿ ಪಾಕಿಸ್ತಾನ ಒಪ್ಪಿಕೊಂಡಿದೆ' ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ. ಮುರಳೀಧರನ್‌ ಅವರು ಪ್ರಶ್ನೋತ್ತರ ಅವಧಿಯಲ್ಲಿ ಹೇಳಿದರು.

'ಭಾರತ-ಪಾಕಿಸ್ತಾನದ ನುಡುವೆ 2008ರ ಮೇ 21ರಂದು 'ದೂತವಾಸ ಪ್ರವೇಶ ಒಪ್ಪಂದ' ಆಗಿದೆ. ಅದರ ಪ್ರಕಾರ ಎರಡೂ ದೇಶಗಳ ಜೈಲುಗಳಲ್ಲಿ ಇರುವ ಎರಡೂ ಕಡೆಗಳ ನಾಗರಿಕರ, ಮೀನುಗಾರರ ಪಟ್ಟಿಗಳನ್ನು ಪ್ರತಿ ವರ್ಷದ ಜನವರಿ 1 ಮತ್ತು ಜುಲೈ 1 ರಂದು ವಿನಿಮಯ ಮಾಡಿಕೊಳ್ಳಲಾಗುತ್ತದೆ' ಎಂದು ಮುರಳೀಧರನ್ ಲೋಕಸಭೆಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು