ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬಿಐನಲ್ಲಿ 588 ಪ್ರಕರಣಗಳ ವಿಚಾರಣೆ ಬಾಕಿ: ಕೇಂದ್ರ ಸರ್ಕಾರ

Last Updated 11 ಫೆಬ್ರುವರಿ 2021, 8:31 IST
ಅಕ್ಷರ ಗಾತ್ರ

ನವದೆಹಲಿ: ‘ಸಿಬಿಐನಲ್ಲಿ ಒಟ್ಟು 588 ಪ್ರಕರಣಗಳು ವಿಚಾರಣೆಗಾಗಿ ಬಾಕಿ ಇವೆ’ ಎಂದು ಕೇಂದ್ರ ಸರ್ಕಾರ ಗುರುವಾರ ರಾಜ್ಯಸಭೆಗೆ ತಿಳಿಸಿದೆ.

‘ಡಿಸೆಂಬರ್‌ 31, 2019ರಲ್ಲಿ ವಿಚಾರಣೆಗಾಗಿ ಒಟ್ಟು 711 ಪ್ರಕರಣಗಳು ಬಾಕಿ ಇದ್ದವು. ಆದರೆ ಡಿಸೆಂಬರ್‌ 31, 2020ರ ವೇಳೆಗೆ ಬಾಕಿ ಪ್ರಕರಣಗಳ ಸಂಖ್ಯೆ 588ಕ್ಕೆ ಇಳಿದಿವೆ’ ಎಂದು ಕೇಂದ್ರ ಸಿಬ್ಬಂದಿ ಸಚಿವಾಲಯದ ರಾಜ್ಯ ಖಾತೆ ಸಚಿವ ಜಿತೇಂದ್ರ ಸಿಂಗ್‌ ಅವರು ರಾಜ್ಯಸಭೆಯಲ್ಲಿ ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

‘2020ರಲ್ಲಿ ರಾಜಕೀಯ ನಾಯಕರ ವಿರುದ್ಧ ಸಿಬಿಐನಲ್ಲಿ ಆರು ಪ್ರಕರಣಗಳು ದಾಖಲಾಗಿವೆ’ ಎಂದು ಅವರು ತಿಳಿಸಿದರು.

‘ಕೇಂದ್ರೀಯ ತನಿಖಾ ದಳವು (ಸಿಬಿಐ) ಸಾರ್ವಜನಿಕ ಸೇವಕರು, ಬ್ಯಾಂಕ್‌, ದೊಡ್ಡ ಸಂಸ್ಥೆ ಮತ್ತು ಖಾಸಗಿ ವ್ಯಕ್ತಿಗಳ ವಿರುದ್ಧದ ಸಂಕೀರ್ಣ ಮತ್ತು ದೊಡ್ಡ ಪ್ರಕರಣಗಳ ವಿಚಾರಣೆಯನ್ನು ನಡೆಸುತ್ತದೆ. ಕೆಲವೊಮ್ಮೆ ಬಾಕಿ ಉಳಿದಿರುವ ಹಳೆಯ ಪ್ರಕರಣಗಳನ್ನು ಕೂಡ ಸಿಬಿಐ ಕೈಗೆತ್ತಿಗೊಳ್ಳುತ್ತದೆ’ ಎಂದು ಜಿತೇಂದ್ರ ಸಿಂಗ್‌ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT