ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇ ಆರಂಭದಲ್ಲೇ 64 ಲಕ್ಷ ಜನರಿಗೆ ಸೋಂಕು: ಐಸಿಎಂಆರ್

ಮೇ–ಜೂನ್ ಅವಧಿಯಲ್ಲಿ ನಡೆದ ರಾಷ್ಟ್ರಮಟ್ಟದ ಮೊದಲ ಸೆರೊಸರ್ವೆ ವರದಿ
Last Updated 11 ಸೆಪ್ಟೆಂಬರ್ 2020, 18:01 IST
ಅಕ್ಷರ ಗಾತ್ರ
ADVERTISEMENT
""

ನವದೆಹಲಿ: ಮೇ ತಿಂಗಳ ಆರಂಭದಲ್ಲೇ ದೇಶದ 64,68,388 ಜನರು ಕೋವಿಡ್‌ಗೆ ಒಳಗಾಗಿದ್ದರು ಎಂಬ ಅಂಶವನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ನಡೆಸಿದ್ದ ರಾಷ್ಟ್ರಮಟ್ಟದ ಮೊದಲ ಸೆರೊಸರ್ವೆಬಹಿರಂಗಪಡಿಸಿದೆ. ಅಂದರೆ ಶೇ 0.73ರಷ್ಟು ವಯಸ್ಕರು ಸಾರ್ಸ್‌–ಕೊವ್–2 ವೈರಸ್‌ಗೆ ಮುಖಾಮುಖಿಯಾಗಿದ್ದಾರೆ ಎಂದು ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ಸೈನ್ಸ್‌ನಲ್ಲಿ ಪ್ರಕಟವಾದ ವರದಿ ಉಲ್ಲೇಖಿಸಿದೆ.

ಪ್ರಜಾವಾಣಿ ಗ್ರಾಫಿಕ್ಸ್‌

ಅಂಕಿ–ಅಂಶ

28,000:ಸಮೀಕ್ಷೆಗೆ ಒಳಪಟ್ಟ ಜನರ ಸಂಖ್ಯೆ

11/05ರಿಂದ 04/06:ಸಮೀಕ್ಷೆ ನಡೆಸಿದ ಅವಧಿ

70:ದೇಶದಲ್ಲಿ ಸಮೀಕ್ಷೆಗೆ ಒಳಪಟ್ಟ ಜಿಲ್ಲೆಗಳ ಸಂಖ್ಯೆ

25.9%:ಸಮೀಕ್ಷೆಗೆ ಒಳಗಾದ ನಗರದ ಕ್ಲಸ್ಟರ್‌ಗಳ ಪ್ರಮಾಣ

ಹೀಗಿತ್ತು ಸಮೀಕ್ಷೆ

ಏಪ್ರಿಲ್ 25ರಂದು ವರದಿಯಾದ ಕೋವಿಡ್ ಪ್ರಕರಣಗಳನ್ನು ಆಧರಿಸಿ, ದೇಶದ ಒಟ್ಟು 70 ಜಿಲ್ಲೆಗಳನ್ನು ನಾಲ್ಕು ಸ್ತರಗಳಲ್ಲಿ ವರ್ಗೀಕರಣ ಮಾಡಲಾಗಿತ್ತು.ಶೂನ್ಯ ಪ್ರಕರಣದ ಜಿಲ್ಲೆಗಳು (15 ಜಿಲ್ಲೆ), ಕಡಿಮೆ ಪ್ರಕರಣದ ಜಿಲ್ಲೆಗಳು (22 ಜಿಲ್ಲೆ), ಮಧ್ಯಮಪ್ರಕರಣದ ಜಿಲ್ಲೆಗಳು (16 ಜಿಲ್ಲೆ) ಮತ್ತು ಅಧಿಕಪ್ರಕರಣದ ಜಿಲ್ಲೆಗಳು (17 ಜಿಲ್ಲೆ) ಇದರಲ್ಲಿ ಸೇರದ್ದವು. ಈ ನಾಲ್ಕೂ ಸ್ತರಗಳಿಂದ 30,283 ಮನೆಗಳಿಗೆ ಸಮೀಕ್ಷಾ ತಂಡಗಳು ಭೇಟಿ ನೀಡಿದ್ದವು.ನಾಲ್ಕೂ ಸ್ತರದ ಜಿಲ್ಲೆಗಳಲ್ಲಿ ಕಂಡುಬಂದ ಸೋಂಕು ಪ್ರಮಾಣ 0.62%ರಿಂದ 1.03% ಎಂದು ವರದಿ ತಿಳಿಸಿದೆ.ಕೋವಿಡ್ ಕವಚ ಎಲಿಸಾ ಕಿಟ್‌ ಮೂಲಕ ವ್ಯಕ್ತಿಯ ರಕ್ತದಲ್ಲಿರುವ ಐಜಿಜಿ ಪ್ರತಿಕಾಯಗಳ ಪ್ರಮಾಣ ಎಷ್ಟಿದೆ ಎಂದು ಪತ್ತೆಹಚ್ಚಲಾಯಿತು.

ಸೆರೊಪಾಸಿಟಿವಿಟಿ ಪ್ರಮಾಣ

43.3%:18–45ರ ನಡುವಿನ ವಯಸ್ಸಿನವರಲ್ಲಿ

39.5%:46–60ರ ನಡುವಿನ ವಯಸ್ಸಿನವರಲ್ಲಿ

17.2%:60 ವರ್ಷಕ್ಕೂ ಮೇಲ್ಪಟ್ಟವರಲ್ಲಿ

ಸಮೀಕ್ಷೆ ಕಂಡುಕೊಂಡ ಅಂಶಗಳು

*ದೇಶದಲ್ಲಿ ಸೋಂಕು ಇರುವಿಕೆ ಪ್ರಮಾಣ ತುಂಬಾ ಕಡಿಮೆ. ಮೇ ಮಧ್ಯಭಾಗದಲ್ಲಿ ಶೇ 1ಕ್ಕಿಂತಲೂ ಕಡಿಮೆ ವಯಸ್ಕರು ಸೋಂಕಿಗೆ ತೆರೆದುಕೊಂಡಿದ್ದಾರೆ

*ದೇಶದ ಹೆಚ್ಚಿನ ಜಿಲ್ಲೆಗಳಲ್ಲಿ ಸೋಂಕಿನ ಹರಡುವಿಕೆ ಪ್ರಮಾಣ ತೀರಾ ಕಡಿಮೆ ಇದೆ. ಇದರರ್ಥ ಭಾರತವು ಸಾಂಕ್ರಾಮಿಕ ಪಿಡುಗಿನ ಆರಂಭಿಕ ಹಂತದಲ್ಲಿದೆ. ದೇಶದ ಬಹುಪಾಲು ಮಂದಿ ಸಾರ್ಸ್–ಕೊವ್–2 ಸೋಂಕಿಗೆ ಮುಂದಿನ ದಿನಗಲ್ಲಿ ಗುರಿಯಾಗಲಿದ್ದಾರೆ

*ಸೋಂಕಿಗೆ ತೆರೆದುಕೊಳ್ಳುವ ಅಪಾಯವಿರುವ ಕೆಲಸಗಳನ್ನು ನಿರ್ವಹಿಸುತ್ತಿರುವ ನಗರದ ಕೊಳಗೇರಿಗಳ ಪುರುಷರಲ್ಲಿ ಸೆರೆಪಾಸಿಟಿವಿಟಿ ಅಧಿಕವಾಗಿದೆ ಎಂದು ಕಂಡುಬಂದಿದೆ

*ವರದಿಯಾದ ಕೋವಿಡ್ ಪ್ರಕರಣಗಳ ಪ್ರಕಾರ, ಒಟ್ಟಾರೆ ಶೇ 0.73ರಷ್ಟು ಜನರಲ್ಲಿ ರೋಗಲಕ್ಷಣಗಳು ಕಂಡುಬಂದಿವೆ. ಅಂದರೆ, ಒಂದು ಆರ್‌ಟಿ–ಪಿಸಿಆರ್‌ ಪರೀಕ್ಷೆ ಪಾಸಿಟಿವ್ ಆಗಿದ್ದರೆ, ದೇಶದಲ್ಲಿ 82–130 ಸೋಂಕು ಪ್ರಕರಣಗಳು ಇವೆ ಎಂದು ಅರ್ಥೈಸಿಕೊಳ್ಳಬಹುದು

*ದೇಶದ ನಾಲ್ಕು ಜಿಲ್ಲೆಗಳ ಜಿಲ್ಲಾ ಕೇಂದ್ರಗಳಲ್ಲಿ ಪರೀಕ್ಷಾ ಪ್ರಯೋಗಾಲಯ ಇಲ್ಲದ ಕಾರಣ, ಮಾದರಿಗಳನ್ನು ರಾಜ್ಯ ರಾಜಧಾನಿಗೆ ಕಳುಹಿಸುವ ಸ್ಥಿತಿ ಇದೆ

*ಶೂನ್ಯ ಹಾಗೂ ಕಡಿಮೆ ಪ್ರಕರಣಗಳು ವರದಿಯಾದ ಜಿಲ್ಲೆಗಳಲ್ಲಿ ನಿಗಾ ಹೆಚ್ಚಳ, ಶಂಕಿತರ ಪತ್ತೆ, ಪರೀಕ್ಷಾ ಸೌಕರ್ಯ ಹೆಚ್ಚಳ ಅಗತ್ಯ ಎಂಬುದನ್ನು ವರದಿ ತಿಳಿಸಿದೆ

*ರೋಗಲಕ್ಷಣ ಇರುವ ಎಲ್ಲರ ಪರೀಕ್ಷೆ, ದೃಢಪಟ್ಟ ಪ್ರಕರಣಗಳನ್ನು ಪ್ರತ್ಯೇಕಿಸುವುದು ಮತ್ತು ಪ್ರಸರಣವನ್ನು ನಿಧಾನಗೊಳಿಸಲು ಕ್ರಮ ತೆಗೆದುಕೊಳ್ಳುವುದು, ಹೆಚ್ಚಿನ ಅಪಾಯದ ಸಂಪರ್ಕಿತರನ್ನು ಪತ್ತೆಹಚ್ಚಿ ಪ್ರತ್ಯೇಕಗೊಳಿಸವುದು ಸೇರಿದಂತೆ ವಿವಿಧ ಕ್ರಮಗಳ ಅಗತ್ಯವನ್ನು ಈ ವರದಿ ಒತ್ತಿ ಹೇಳಿದೆ

ಸಮೀಕ್ಷೆಯಲ್ಲಿ ಯಾರಿದ್ದರು?

48.%:18–45 ವರ್ಷದೊಳಗಿನವರು

14,390:ಈ ಪೈಕಿ ಮಹಿಳೆಯರ ಸಂಖ್ಯೆ

18.7%:ಸಮೀಕ್ಷೆಗೆ ಪ್ರತಿಕ್ರಿಯಿಸಿದವರ ಪೈಕಿ, ಸೋಂಕಿತರಿಗೆ ಮುಖಾಮುಖಿಯಾಗುವ ಅಪಾಯವನ್ನು ಹೊಂದಿರುವ ಉದ್ಯೋಗದಲ್ಲಿ ತೊಡಗಿಸಿಕೊಂಡವರ ಪ್ರಮಾಣ

ಆಧಾರ: ಪಿಟಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT