ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಜೋರಾಂನಲ್ಲಿ ಕಳೆದ ವರ್ಷ ಡ್ರಗ್ಸ್‌ನಿಂದ ಸತ್ತವರ ಸಂಖ್ಯೆ ಎಷ್ಟು ಗೊತ್ತೇ?

Last Updated 5 ಜನವರಿ 2021, 9:42 IST
ಅಕ್ಷರ ಗಾತ್ರ

ಐಜ್ವಾಲ್: ಮಿಜೋರಾಂನಲ್ಲಿಕಳೆದ ವರ್ಷ ಮಾದಕ ದ್ರವ್ಯ ಸೇವೆನೆಯಿಂದಾಗಿ ಆರು ಮಹಿಳೆಯರು ಸೇರಿದಂತೆ ಒಟ್ಟು 67 ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ ‘ಹೆರಾಯಿನ್’ ಮಾದಕ ದ್ರವ್ಯಕ್ಕೆ ಬಲಿಯಾದವರೇ ಹೆಚ್ಚು ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

2019ರಲ್ಲಿ ಮಿಜೋರಾಂನಲ್ಲಿ ಒಟ್ಟು 55 ಮಂದಿ ಮಾದಕ ವಸ್ತುಗಳ ವ್ಯಸನಕ್ಕೆ ಒಳಗಾಗಿ ಮೃತಪಟ್ಟಿದ್ದರು.

‘ಮ್ಯಾನ್ಮಾರ್‌ನಿಂದ ಹೆರಾಯಿನ್ ಸೇರಿದಂತೆ ಹೆಚ್ಚಿನ ಮಾದಕ ವಸ್ತುಗಳು ಕಳ್ಳಸಾಗಣೆ ಮೂಲಕ ಬರುತ್ತಿವೆ. ಇದನ್ನು ತಡೆಯಲು ಸರ್ಕಾರ ಹಲವು ಕ್ರಮಗಳನ್ನೂ ತೆಗೆದುಕೊಂಡಿದೆ’ ಎಂದು ಮಾದಕವಸ್ತು ನಿಗ್ರಹ ದಳದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್‌ ಮಧ್ಯದಲ್ಲಿರುವ ಮಿಜೋರಾಂನಲ್ಲಿ 1984ರಿಂದ ಡ್ರಗ್ಸ್‌ ಹಾವಳಿ ಹೆಚ್ಚಿದೆ.

ಮಿಜೋರಾಂನಲ್ಲಿ 1984ರಿಂದ ಈವರೆಗೆ 193 ಮಹಿಳೆಯರೂ ಸೇೆರಿದಂತೆ 1,646 ಮಂದಿ ಡ್ರಗ್ಸ್‌ನಿಂದಾಗಿ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT