ಭಾನುವಾರ, ಜನವರಿ 24, 2021
27 °C

ಇಂಗ್ಲೆಂಡ್‌ನಿಂದ ಬಂದ 68ಪ್ರಯಾಣಿಕರಿಗೆ ಕೋವಿಡ್; ರೂಪಾಂತರಿತ ವೈರಸ್ ಪ್ರಕರಣಗಳಿಲ್ಲ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ಮುಂಬೈ: ಇಂಗ್ಲೆಂಡ್‌ನಿಂದ ಮಹಾರಾಷ್ಟ್ರಕ್ಕೆ ಮರಳಿರುವ ಒಟ್ಟು 68 ಪ್ರಯಾಣಿಕರಲ್ಲಿ ಕೋವಿಡ್–19 ದೃಢಪಟ್ಟಿದ್ದು, ಇದುವರೆಗೆ ರೂಪಾಂತರಗೊಂಡ ವೈರಸ್‌ ಪ್ರಕರಣಗಳು ದಾಖಲಾಗಿಲ್ಲ ಎಂದು ವರದಿಯಾಗಿವೆ.

‘ನವೆಂಬರ್‌ 15 ಮತ್ತು ಡಿಸೆಂಬರ್‌ 23ರ ಅವಧಿಯಲ್ಲಿ ಇಂಗ್ಲೆಂಡ್‌ನಿಂದ ಬಂದಿಳಿದ 4,474 ಜನರನ್ನು ಪತ್ತೆಹಚ್ಚಲಾಗಿದ್ದು, 3,278 ಜನರಿಗೆ ಆರ್‌ಟಿ–ಪಿಸಿಆರ್‌ ಕೋವಿಡ್–19 ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 68 ಜನರಿಗೆ ಸೋಂಕು ದೃಢಪಟ್ಟಿದೆ. ಆದರೆ, ಅದರಲ್ಲಿ ರೂಪಾಂತರಗೊಂಡ ವೈರಸ್‌ ಪ್ರಕರಣಗಳಿವೆಯೇ ಎಂಬುದು ಇನ್ನೂ ಖಚಿತವಾಗಿಲ್ಲ’ ಎಂದು ಮಹಾರಾಷ್ಟ್ರ ಕಣ್ಗಾವಲು ಕಚೇರಿಯ ಪ್ರದೀಪ್‌ ಅವಟೆ ತಿಳಿಸಿದ್ದಾರೆ.

ಸೋಂಕು ಪ್ರಕರಣಗಳ ವಿಧವನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಸೋಂಕಿತರ ಮಾದರಿಗಳನ್ನು ಪುಣೆಯಲ್ಲಿರುವ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಕಳುಹಿಸಲಾಗಿದೆ. 68ರಲ್ಲಿ ಆರು ಮಾದರಿಗಳ ಫಲಿತಾಂಶವನ್ನು ನಿರೀಕ್ಷಿಸಲಾಗುತ್ತಿದೆ.

ಸದ್ಯ ಸೋಂಕಿತರಲ್ಲಿ ಮುಂಬೈನ 29, ಪುಣೆಯ 13, ಥಾಣೆಯ 7, ನಾಗಪುರದ 9, ನಾಸಿಕ್‌, ಔರಂಗಾಬಾದ್‌, ರಾಯಗಢ, ಬುಲ್ಧಾನದ ತಲಾ ಇಬ್ಬರು ಹಾಗೂ ನಾಂದೇಡ್, ವಾಶೀಮ್‌ನ ತಲಾ ಒಬ್ಬರು ಎಂದು ಗುರುತಿಸಲಾಗಿದೆ.

ರೂಪಾಂತರಿತ ವೈರಸ್‌ನಿಂದ ಸೋಂಕು ಪ್ರಕರಣಗಳು ತೀವ್ರವಾಗಿ ಏರಿಕೆಯಾಗಲಿವೆ ಎನ್ನಲಾಗಿದ್ದು, ಹೊಸ ಪ್ರಕರಣಗಳ ಬಗ್ಗೆ ನಿಗಾ ಇಡುವಂತೆ ರಾಜ್ಯ ಸರ್ಕಾರವು ಅಧಿಕಾರಿಗಳಿಗೆ ಎಚ್ಚರಿಸಿದೆ. ಸೋಂಕಿತರ ಸಂಪರ್ಕ ಪತ್ತೆಗೆ ಸರ್ಕಾರ ಗಮನಹರಿಸಿದೆ. ‘ಸದ್ಯ ಇಂಗ್ಲೆಂಡ್‌ನಿಂದ ಬಂದಿರುವ ಪ್ರಯಾಣಿಕರು ಮತ್ತು ಸೋಂಕಿತರ ಸಂಪರ್ಕಕ್ಕೆ ಬಂದಿರುವ ಒಟ್ಟು 426 ಜನರನ್ನು ಪತ್ತೆಹಚ್ಚಲಾಗಿದೆ. ಅದರಲ್ಲಿ 26 ಜನರಿಗೆ ಸೋಂಕು ದೃಢಪಟ್ಟಿದೆ’ ಎಂದು ಅವಟೆ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು