ಗುರುವಾರ , ಆಗಸ್ಟ್ 5, 2021
22 °C

ಕೋವಿಡ್‌ ಎರಡನೇ ಅಲೆಯಿಂದ 730 ವೈದ್ಯರು ಸಾವು: ಐಎಂಎ ಮಾಹಿತಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶದಲ್ಲಿ ಕೋವಿಡ್‌ ಎರಡನೇ ಅಲೆಯಿಂದಾಗಿ 730 ವೈದ್ಯರು ಮೃತಪಟ್ಟಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಘ (ಐಎಂಎ) ಮಾಹಿತಿ ನೀಡಿದೆ.

ಬಿಹಾರದಲ್ಲಿ ಗರಿಷ್ಠ 115 ಸಾವು ಸಂಭವಿಸಿದ್ದು, ದೆಹಲಿಯಲ್ಲಿ 109, ಉತ್ತರ ಪ್ರದೇಶ 79, ಪಶ್ಚಿಮ ಬಂಗಾಳ 62, ರಾಜಸ್ಥಾನ 43, ಜಾರ್ಖಂಡ್ 39, ಮತ್ತು ಆಂಧ್ರಪ್ರದೇಶ 38 ವೈದ್ಯರು ಸಾವಿಗೀಡಾಗಿದ್ದಾರೆ ಎಂದು ಅಂಕಿ ಅಂಶಗಳು ತಿಳಿಸಿವೆ.

ಐಎಂಎ ಪ್ರಕಾರ ಕೋವಿಡ್‌ ಮೊದಲ ಅಲೆಯಲ್ಲಿ 748 ವೈದ್ಯರು ಸಾವನ್ನಪ್ಪಿದ್ದಾರೆ.

‘ಕಳೆದ ವರ್ಷ ದೇಶದಾದ್ಯಂತ 748 ವೈದ್ಯರು ಕೋವಿಡ್‌ನಿಂದ ಅಸುನಿಗಿದ್ದರು. ಆದರೆ, ಎರಡನೇ ಅಲೆಯಿಂದಾಗಿ 730 ವೈದ್ಯರನ್ನು ಕಳೆದುಕೊಂಡಿದ್ದೇವೆ’ ಎಂದು ಐಎಂಎಗೆ ಸಂಬಂಧಿಸಿದ ವೈದ್ಯರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು