ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಎಕ್ಸ್‌ಬಿಬಿ1.16 ಉಪತಳಿಯ 76 ಪ್ರಕರಣ ಪತ್ತೆ

Last Updated 18 ಮಾರ್ಚ್ 2023, 14:07 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ಈಚೆಗೆ ದೃಢಪಟ್ಟಿ ಕೋವಿಡ್‌ ಪ್ರಕರಣದಲ್ಲಿ ಕೊರೊನಾ ವೈರಾಣುವಿನ ‘ಎಕ್ಸ್‌ಬಿಬಿ1.16’ ಉಪತಳಿಯ ಒಟ್ಟು 76 ಪ್ರಕರಣಗಳು ಪತ್ತೆಯಾಗಿವೆ. ಕೋವಿಡ್‌ ಪ್ರಕರಣಗಳು ಹೆಚ್ಚಾಗಲು ಈ ಉಪತಳಿಯೂ ಕಾರಣ ಇರಬಹುದು ಎಂದು ಭಾರತೀಯ ಸಾರ್ಸ್‌–ಕೋವ್‌–2 ಜಿನೋಮಿಕ್ಸ್‌ ಸಹಯೋಗ (ಐಎನ್‌ಎಸ್‌ಎಸಿಒಜಿ) ಹೇಳಿದೆ.

ಈ ಉಪತಳಿಯ 30 ಪ್ರಕರಣಗಳು ಪತ್ತೆಯಾಗುವ ಮೂಲಕ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ನಂತರದಲ್ಲಿ ಮಹಾರಾಷ್ಟ್ರ(29), ಪುದುಚೆರಿ(7), ದೆಹಲಿ(5), ತೆಲಂಗಾಣ(2), ಗುಜರಾತ್‌(1), ಹಿಮಾಚಲ ಪ್ರದೇಶ(1) ಮತ್ತು ಒಡಿಶಾ(1) ರಾಜ್ಯಗಳಿವೆ ಎಂದು ಐಎನ್‌ಎಸ್‌ಎಸಿಒಜಿಯ ಅಂಕಿಅಂಶ ತಿಳಿಸಿದೆ.

ಎಕ್ಸ್‌ಬಿಬಿ1.16 ಉಪತಳಿ ಮಾದರಿಯು ಜನವರಿಯಲ್ಲಿ ಮೊದಲ ಬಾರಿ ಪತ್ತೆಯಾಗಿತ್ತು. ಫೆಬ್ರುವರಿಯಲ್ಲಿ ಇದರ 59 ಪ್ರಕರಣಗಳು ಪತ್ತೆಯಾಗಿದ್ದವು. ಮಾರ್ಚ್‌ನಲ್ಲಿ ಈ ವರೆಗೆ 15 ಪ್ರಕರಣಗಳು ಪತ್ತೆಯಾಗಿವೆ.

ಸದ್ಯ ದೇಶದಲ್ಲಿ ಕೋವಿಡ್‌ ಪ್ರಕರಣಗಳ ಹೆಚ್ಚಳವಾಗಿರುವುದಕ್ಕೆ ಈ ಎಕ್ಸ್‌ಬಿಬಿ1.16 ಉಪತಳಿ ಕಾರಣವಿರಬಹುದು ಮತ್ತು ಇನ್‌ಫ್ಲುಯೆಂಝಾ(ಜ್ವರ, ನೆಗಡಿ) ಪ್ರಕರಣಗಳು ಹೆಚ್ಚಳವಾಗಿರುವುದಕ್ಕೆ ಎಚ್‌3ಎನ್‌2 ವೈರಾಣು ಕಾರಣ ಎಂದು ಏಮ್ಸ್‌ ಮಾಜಿ ನಿರ್ದೇಶಕ ಡಾ. ರಣದೀಪ್‌ ಗುಲೇರಿಯಾ ಅವರು ತಿಳಿಸಿದ್ದಾರೆ.

126 ದಿನಗಳ ನಂತರ ಭಾರತದಲ್ಲಿ ಒಂದು ದಿನದ ಕೋವಿಡ್‌ ಪ್ರಕರಣದ ಸಂಖ್ಯೆ ಶನಿವಾರ 800 ದಾಟಿದೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 5,389 ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT