ಗುರುವಾರ , ಜನವರಿ 28, 2021
25 °C

ಚೆನ್ನೈ: ಹೋಟೆಲ್‌ನ 85 ಸಿಬ್ಬಂದಿಗೆ ಕೋವಿಡ್–19 ದೃಢ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ಚೆನ್ನೈ: ನಗರದ ಐಟಿಸಿ ಗ್ರಾಂಡ್ ಚೋಲಾ ಹೋಟೆಲ್‌ನ 85 ಸಿಬ್ಬಂದಿಗೆ ಕಳೆದ ವರ್ಷ ಡಿಸೆಂಬರ್‌ 15ರಿಂದ ಈಚೆಗೆ ಕೋವಿಡ್–19 ದೃಢಪಟ್ಟಿದೆ ಎಂದು ಚೆನ್ನೈ ಮಹಾನಗರ ಪಾಲಿಕೆ ತಿಳಿಸಿದೆ.

ಹೋಟೆಲ್‌ನ 609 ಸಿಬ್ಬಂದಿಗೆ ಕೋವಿಡ್–19 ಪರೀಕ್ಷೆ ನಡೆಸಲಾಗಿದ್ದು, ಒಟ್ಟು 85 ಪ್ರಕರಣಗಳು ದೃಢಪಟ್ಟಿವೆ. 2020ರ ಡಿಸೆಂಬರ್‌ 31ರಂದು 16 ಹಾಗೂ 2021ರ ಜನವರಿ 1ರಂದು 13 ಪ್ರಕರಣಗಳು ವರದಿಯಾಗಿವೆ. ಹೀಗಾಗಿ ನಗರದ ಎಲ್ಲ ಐಷಾರಾಮಿ ಹೋಟೆಲ್‌ಗಳು ಸಿಬ್ಬಂದಿಗೆ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಬೇಕು ಎಂದು ಪಾಲಿಕೆ ನಿರ್ದೇಶನ ನೀಡಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ತಮಿಳುನಾಡಿನಲ್ಲಿ ಜನವರಿ 2ರ ವರೆಗೆ ಒಟ್ಟು 8.19,845 ಪ್ರಕರಣಗಳು ವರದಿಯಾಗಿವೆ, ಇದರಲ್ಲಿ 7,99,427 ಸೋಂಕಿತರು ಗುಣಮುಖರಾಗಿದ್ದಾರೆ. ಉಳಿದಂತೆ 12,146 ಮಂದಿ ಮೃತಪಟ್ಟಿದ್ದಾರೆ. ಇನ್ನೂ 8,272 ಪ್ರಕರಣಗಳು ಸಕ್ರಿಯವಾಗಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು