ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿಯಲ್ಲಿ ಶೇ 90 ರಷ್ಟು ವಯಸ್ಕರಿಗೆ ಕೋವಿಡ್‌ ಮೊದಲ ಡೋಸ್‌ ಪೂರೈಕೆ

Last Updated 27 ಫೆಬ್ರುವರಿ 2022, 11:28 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕಳೆದ ಜನವರಿ 3 ರಿಂದ ಆರಂಭವಾದ ಲಸಿಕಾ ಅಭಿಯಾನದಲ್ಲಿ ಇದುವರೆಗೆ ರಾಜಧಾನಿ ನಗರದಲ್ಲಿ ಶೇ 90 ರಷ್ಟು 15 ರಿಂದ 18 ವಯಸ್ಸಿನ ವಯಸ್ಕರಿಗೆ ಕೋವಿಡ್‌ನ ಮೊದಲ ಡೋಸ್ ಪೂರೈಕೆ ಮಾಡಲಾಗಿದೆ ಎಂದು ಅಧಿಕೃತ ದತ್ತಾಂಶ ಮಾಹಿತಿ ನೀಡಿದೆ.

ಫೆಬ್ರುವರಿ 24 ವರೆಗಿನ ಮಾಹಿತಿ ಪ್ರಕಾರ ಶೇ 54 ರಷ್ಟು ವಯಸ್ಕರು ಕೋವಿಡ್‌ನ ಎರಡನೇ ಡೋಸ್‌ ಪಡೆದಿರುವುದಾಗಿ ಈ ವಾರದ ಆರಂಭದಲ್ಲಿ ನಡೆದ ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ) ನಡೆಸಿದ ಸಭೆಯಲ್ಲಿ ಸಲ್ಲಿಸಿದ ದತ್ತಾಂಶದ ವರದಿಯಲ್ಲಿ ಉಲ್ಲೇಖಿಸಿದೆ.

ದೆಹಲಿಯ ನೈರುತ್ಯ ಜಿಲ್ಲೆಯಲ್ಲಿ 1,22,717ಅತಿಹೆಚ್ಚು ವಯಸ್ಕರು ಕೋವಿಡ್‌ನ ಮೊದಲ ಡೋಸ್‌, 74,881 ಎರಡನೇ ಡೋಸ್‌ ಲಸಿಕೆ ಪಡೆದಿದ್ದಾರೆ. ನಂತರ ವಾಯುವ್ಯ ಭಾಗದಲ್ಲಿ 1,17,560 ಮೊದಲ ಡೋಸ್‌, 65,617 ಮತ್ತು ಪಶ್ಚಿಮ ಭಾಗದಲ್ಲಿ 93,251 ವಯಸ್ಕರು ಮತ್ತು ನೈರುತ್ಯ ಭಾಗದಲ್ಲಿ 61,674 ವಯಸ್ಕರಿಗೆ ಎರಡನೇ ಡೋಸ್‌ ನೀಡಲಾಗಿದೆ ಎಂದು ದತ್ತಾಂಶ ಮಾಹಿತಿ ನೀಡಿದೆ.

ವಯಸ್ಕರಿಗೆ ಲಸಿಕೆ ನೀಡಲು 20 ಶಾಲೆಗಳಲ್ಲಿ ತಾತ್ಕಾಲಿಕ ಲಸಿಕಾ ಕೇಂದ್ರಗಳನ್ನು ತೆರೆಯುವಂತೆದೆಹಲಿ ಸರ್ಕಾರವು ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT