ಶನಿವಾರ, ಡಿಸೆಂಬರ್ 4, 2021
26 °C

ಶೇ 95ರಷ್ಟು ಜನರಿಗೆ ಬಿಜೆಪಿ ಬೇಕಿಲ್ಲ: ಅಖಿಲೇಶ್‌ ಯಾದವ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಖನೌ: ‘ಶೇ 95ರಷ್ಟು ಜನರಿಗೆ ಬಿಜೆಪಿ ಅಗತ್ಯವಿಲ್ಲ‘ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್ ಹೇಳಿದ್ದಾರೆ. ‘ಶೇ 95ರಷ್ಟು ಜನರಿಗೆ ಪೆಟ್ರೋಲ್‌, ಡೀಸೆಲ್‌ ಅಗತ್ಯವಿಲ್ಲ’ ಎಂಬ ಉತ್ತರ ಪ್ರದೇಶದ ಸಚಿವ ಉಪೇಂದ್ರ ತಿವಾರಿ ಅವರ ಹೇಳಿಕೆ ಅಖಿಲೇಶ್‌ ಹೀಗೆ ತಿರುಗೇಟು ನೀಡಿದ್ದಾರೆ.

ತಲಾವಾರು ಆದಾಯಕ್ಕೆ ಹೋಲಿಸಿದರೆ ಪೆಟ್ರೋಲ್‌, ಡೀಸೆಲ್ ಬೆಲೆ ಅಷ್ಟೇನೂ ಏರಿಕೆಯಾಗಿಲ್ಲ. ಶೇ 95ರಷ್ಟು ಜನರಿಗೆ ಪೆಟ್ರೋಲ್‌, ಡೀಸೆಲ್‌ ಅಗತ್ಯವೇ ಇಲ್ಲ ಎಂದು ತಿವಾರಿ ಗುರುವಾರ ಹೇಳಿದ್ದರು.

‘ಸಚಿವರ ಪ್ರಕಾರ, ಜನರಿಗೆ ಪೆಟ್ರೋಲ್‌, ಡೀಸೆಲ್‌ ದರ ಏರಿಕೆ ಪರಿಣಾಮ ಬೀರದು. ಸಚಿವರಿಗೂ ಅದು ಬೇಕಿಲ್ಲ. ಏಕೆಂದರೆ ಜನ ಅವರನ್ನು ಅಧಿಕಾರದಿಂದ ಇಳಿಸುತ್ತಾರೆ. ಶೇ 95ರಷ್ಟು ಜನರಿಗೆ ಬಿಜೆಪಿಯೂ ಬೇಕಿಲ್ಲ‘ ಎಂದು ಅಖಿಲೇಶ್‌ ಹೇಳಿದರು.

ಜೀಪ್‌ಗೆ ಡೀಸೆಲ್‌ ಅಗತ್ಯವಿದೆಯೇ ಎಂದು ಅವರು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ. ಬಿಜೆಪಿ ಕಾರ್ಯಕರ್ತರು ಚಾಲನೆ ಮಾಡುತ್ತಿದ್ದ ಜೀಪ್‌ ಹರಿದು ಈಚೆಗೆ ಲಖಿಂಪುರ ಖೇರಿಯಲ್ಲಿ ನಾಲ್ವರು ರೈತರು ಮೃತಪಟ್ಟಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು