ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ದೆಹಲಿ ಚಲೋ' ಚಳವಳಿಗೆ ಈಗ ರಾಜಸ್ಥಾನದ ರೈತರ ಬೆಂಬಲ

Last Updated 3 ಡಿಸೆಂಬರ್ 2020, 3:18 IST
ಅಕ್ಷರ ಗಾತ್ರ

ನವದೆಹಲಿ: ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ಎಂದು ಒತ್ತಾಯಿಸಿ ಏಳು ದಿನಗಳಿಂದ ದೆಹಲಿ ಹೊರ ವಲಯದ ಸಿಂಗು ಗಡಿಯಲ್ಲಿ ಹೋರಾಟದಲ್ಲಿ ನಿರತರಾಗಿರುವ ಪಂಜಾಬ್‌ ಮತ್ತು ಹರಿಯಾಣದ ರೈತರಿಗೆ ಇಂದು (ಗುರುವಾರ) ರಾಜಸ್ಥಾನದ ರೈತರು ಬೆಂಬಲ ನೀಡಿದ್ದಾರೆ.

ಸಿಂಗು ಗಡಿ ತಲುಪಿರುವ ರಾಜಸ್ಥಾನದ ಕೆಲ ರೈತ ಹೋರಾಟಗಾರರು, ಕೃಷಿ ಕಾಯ್ದೆಗಳ ವಿಚಾರವಾಗಿ ಕೇಂದ್ರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

'ಇನ್ನೂ 500ಕ್ಕೂ ಹೆಚ್ಚು ರೈತರು ರಾಜಸ್ಥಾನದಿಂದ ಇಲ್ಲಿಗೆ ಶೀಘ್ರದಲ್ಲೇ ಬಂದು ತಲುಪಲಿದ್ದಾರೆ. ಕಾಯ್ದೆ ಜಾರಿಯಿಂದ ಕನಿಷ್ಠ ಬೆಂಬಲ ಬೆಲೆಗೆ ಯಾವುದೇ ತೊಂದರೆ ಇಲ್ಲ ಎಂದು ಪ್ರಧಾನ ಮಂತ್ರಿಗಳು ಹೇಳಿದ್ದಾರೆ. ಅವರು ಹೇಳುತ್ತಿರುವುದನ್ನೇ ಕಾಯ್ದೆಯಲ್ಲಿ ಉಲ್ಲೇಖಿಸಲು ಏನು ಸಮಸ್ಯೆ?' ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಪ್ರತಿಭಟನಾನಿರತ ರೈತರ ಸಂಖ್ಯೆಯು ಏರಿಕೆಯಾಗುತ್ತಲೇ ಇದೆ. ‘ನಮ್ಮ ಬೇಡಿಕೆಗಳು ಈಡೇರುವವರೆಗೆ ನಾವಿಲ್ಲಿಂದ ಕದಲುವುದಿಲ್ಲ’ ಎಂದು ಪ್ರತಿಭಟನಕಾರರು ಹೇಳಿದ್ದಾರೆ.

ಗಾಜಿಪುರದಲ್ಲಿ ಪ್ರತಿಭಟನೆಯು ಇನ್ನಷ್ಟು ತೀವ್ರವಾಗಿದ್ದರಿಂದ ದೆಹಲಿ–ಉತ್ತರಪ್ರದೇಶ ಗಡಿಯನ್ನು ಮುಚ್ಚಲಾಗಿದೆ. ಫಿರೋಜಾಬಾದ್‌, ಮೀರಠ್‌, ನೋಯ್ಡಾ ಹಾಗೂ ಇಟಾವಾಗಳಿಂದ ಹೆಚ್ಚಿನ ರೈತರು ಬಂದು ಪ್ರತಿಭಟನಕಾರರನ್ನು ಸೇರಿದ್ದರಿಂದ ದೆಹಲಿ– ನೋಯ್ಡಾ ಸಂಪರ್ಕಿಸುವ ಎಲ್ಲಾ ಗಡಿಗಳನ್ನೂ ಮುಚ್ಚಲಾಗಿದೆ. ಇದರಿಂದಾಗಿ ರಾಜಧಾನಿಯನ್ನು ಸಂಪರ್ಕಿಸುವ ಐದು ರಸ್ತೆಗಳು ಸಂಪೂರ್ಣವಾಗಿ ಬಂದ್‌ ಆಗಿವೆ. ಉಳಿದ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಅತಿಯಾಗಿದ್ದು ಪ್ರಯಾಣಿಕರು ಭಾರಿ ಸಂಕಷ್ಟ ಎದುರಿಸುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT