ಮಂಗಳವಾರ, ಜೂನ್ 28, 2022
25 °C
ದೆಹಲಿ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ

ಪ್ರಧಾನಿ ಮೋದಿಗೆ ಕೊಲೆ ಬೆದರಿಕೆ ಹಾಕಿದ ಯುವಕ: ಕಾರಣ ವಿಚಿತ್ರ!

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ದೆಹಲಿ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಪ್ರಧಾನಿ ನರೇಂದ್ರ ಮೋದಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಯುವಕನೊಬ್ಬನನ್ನು ದೆಹಲಿ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಈಶಾನ್ಯ ದೆಹಲಿಯ ಖಾಜುರಿ ಖಾಸ್ ಎಂಬ ಪ್ರದೇಶದ ಸಲ್ಮಾನ್ (22) ಎಂಬ ಯವುಕನೇ ಬಂಧಿತ.

ಪೊಲೀಸರು ಸಲ್ನಾನ್‌ನನ್ನು ವಿಚಾರಣೆ ನಡೆಸಿದಾಗ, ‘ತನಗೆ ಜೈಲಿನಲ್ಲಿ ಇರುಬೇಕು ಎನಿಸಿದೆ. ಹಾಗಾಗಿ ಈ ಕೆಲಸ ಮಾಡಿದ್ದೇನೆ‘ ಎಂದು ಹೇಳಿದ್ದಾನೆ.

ಆರೋಪಿಯು ಡ್ರಗ್ಸ್‌ ವ್ಯಸನಿಯಾಗಿದ್ದು, ಈ ಹಿಂದೆ 2018 ರಲ್ಲಿ ಕೊಲೆ ಪ್ರಕರಣವೊಂದರಲ್ಲಿ ಬಂಧಿತನಾಗಿದ್ದ. ಆತನನ್ನು ಬಾಲಾಪರಾಧಿಗಳ ಕೇಂದ್ರಕ್ಕೆ ಕಳಿಸಲಾಗಿತ್ತು. ಅಲ್ಲಿಂದ ಬಿಡುಗಡೆಯಾದ ನಂತರವೂ ಮತ್ತೆ ಡ್ರಗ್ಸ್‌ ವ್ಯಸನಕ್ಕೆ ಬಿದ್ದು ಹುಚ್ಚಾಟ ನಡೆಸಿ, ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.

ಇದನ್ನೂ ಓದಿ: ದೇಶದಲ್ಲಿ ಕೊರೊನಾ 2ನೇ ಅಲೆಗೆ 'ಡೆಲ್ಟಾ ರೂಪಾಂತರ‘ ವೈರಸ್ ಕಾರಣ: ಅಧ್ಯಯನ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು