ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೂನ್‌ 10ರಂದು ಅಯೋಧ್ಯೆಗೆ ಆದಿತ್ಯ ಠಾಕ್ರೆ ಭೇಟಿ

Last Updated 8 ಮೇ 2022, 11:14 IST
ಅಕ್ಷರ ಗಾತ್ರ

ಮುಂಬೈ: ‘ಅಸ್ಲಿ ಆ ರಹಾ ಹೈ, ನಕಲಿ ಸೆ ಸಾವಧಾನ್’(ಅಸಲಿ ನಾಯಕ ಬರುತ್ತಿದ್ದಾರೆ, ನಕಲಿ ನಾಯಕನ ಬಗ್ಗೆ ಎಚ್ಚರದಿಂದಿರಿ) ಪೋಸ್ಟರ್‌ ಅಭಿಯಾನದ ನಡುವೆಯೇ ಮಹಾರಾಷ್ಟ್ರದ ಸಚಿವ ಆದಿತ್ಯ ಠಾಕ್ರೆ ಜೂನ್‌ 10ರಂದು ಉತ್ತರ ಪ್ರದೇಶದ ಅಯೋಧ್ಯೆಯ ರಾಮ ಮಂದಿರಕ್ಕೆ ಭೇಟಿ ನೀಡಲಿದ್ದಾರೆ ಎಂದು ಶಿವಸೇನಾ ಘೋಷಿಸಿದೆ.

ಆದಿತ್ಯ ಅವರು ಅಯೋಧ್ಯೆಗೆ ನೀಡಲಿರುವ ಮೂರನೇ ಭೇಟಿ ಇದಾಗಲಿದೆ.

‘ಆದಿತ್ಯ ಅವರು ಅಯೋಧ್ಯೆಗೆ ಭೇಟಿ ನಿಡಲಿದ್ದಾರೆ. ಇದನ್ನು ರಾಜಕೀಯ ದೃಷ್ಟಿಯಿಂದ ನೋಡಬಾರದು. ಇದು ನಂಬಿಕೆಗೆ ಸಂಬಂಧಪಟ್ಟದ್ದು. ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ದೇಶದ ಇತರ ಸ್ಥಳಗಳಿಂದಲೂ ಶಿವ ಸೈನಿಕರು ಆದಿತ್ಯ ಅವರೊಡನೆ ಬರಲಿದ್ದಾರೆ’ ಎಂದು ಶಿವಸೇನಾ ವಕ್ತಾರ, ರಾಜ್ಯ ಸಭೆಯ ಸದಸ್ಯ ಸಂಜಯ್‌ ರಾವುತ್‌ ತಿಳಿಸಿದರು.

ಈ ಕುರಿತು ಮಾತನಾಡಿರುವ ಆದಿತ್ಯ ಠಾಕ್ರೆ, ‘ನಮಗೆಲ್ಲರಿಗೂ ಹಾಗು ರಾಜ್ಯದ ಜನತೆಗೆ ನಾನು ಶ್ರೀರಾಮನ ಆಶೀರ್ವಾದವನ್ನು ಕೋರುತ್ತೇನೆ. ಶಿವಸೇನಾ ಪ್ರಮುಖರು (ಉದ್ಧವ್‌ ಠಾಕ್ರೆ) ಮೇ 14ರ ರ್‍ಯಾಲಿಯಲ್ಲಿ ಏನು ಹೇಳುತ್ತಾರೆ ಕೇಳಬೇಕು’ ಎಂದು ಹೇಳಿದರು.

ಆದಿತ್ಯ ಠಾಕ್ರೆ ಅಯೋಧ್ಯೆಗೆ ಭೇಟಿ ನೀಡುವುದರ ಬಗ್ಗೆ, ಉತ್ತರ ಪ್ರದೇಶದಲ್ಲಿ ‘ಅಸ್ಲಿ ಆ ರಹಾ ಹೈ, ನಕಲಿ ಸೆ ಸಾವಧಾನ್’(ಅಸಲಿ ಬರುತ್ತಿದೆ, ನಕಲಿ ಬಗ್ಗೆ ಎಚ್ಚರದಿಂದಿರಿ) ಎಂಬ ಪೋಸ್ಟರ್‌ ಅಭಿಯಾನ ಶಿವಸೇನಾದಿಂದ ನಡೆಯುತ್ತಿದೆ. ವಾಸ್ತವದಲ್ಲಿ, ಉದ್ಧವ್‌ ಸಂಬಂಧಿ ಹಾಗೂ ಮಹಾರಾಷ್ಟ್ರ ನವನಿರ್ಮಾಣ ಸೇನಾದ ಅಧ್ಯಕ್ಷ ರಾಜ್‌ ಠಾಕ್ರೆ ಜೂನ್‌ 5ರಂದು ಅಯೋಧ್ಯೆಗೆ ನೀಡಲಿರುವ ಬಗ್ಗೆ ಘೋಷಿಸಿದ ಬೆನ್ನಲ್ಲೇ ಈ ಅಭಿಯಾನ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT