ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರುಣಾಚಲ ಪ್ರದೇಶ ಯುವಕನಿಗೆ ಚೀನಾ ಸೇನೆಯಿಂದ ವಿದ್ಯುತ್ ಶಾಕ್‌

Last Updated 1 ಫೆಬ್ರುವರಿ 2022, 12:57 IST
ಅಕ್ಷರ ಗಾತ್ರ

ಇಟಾನಗರ: ಅರುಣಾಚಲ ಪ್ರದೇಶದಿಂದ ಚೀನಾ ಸೇನೆಯು ಅಪಹರಿಸಿದ್ದ ಯುವಕ ಮತ್ತೆ ತನ್ನ ಕುಟುಂಬವನ್ನು ಸೇರಿದ್ದು, ಚೀನಾ ಸೇನೆ ಆತನ ಕಣ್ಣಿಗೆ ಬಟ್ಟೆ ಕಟ್ಟಿ,ಥಳಿಸಿ, ವಿದ್ಯುತ್ ಶಾಕ್‌ ನೀಡಿದ ಮಾಹಿತಿಯನ್ನು ಯುವಕನ ತಂದೆ ಬಹಿರಂಗಪಡಿಸಿದ್ದಾರೆ.‌

ಜನವರಿ 18 ರಂದು ಮಿರಾಮ್‌ (17) ತನ್ನ ಸ್ನೇಹಿತ ಜಾನಿ ಯಾಯಿಂಗ್‌ ಜೊತೆ ಅರುಣಾಚಲ ಪ್ರದೇಶದ ವಾಸ್ತವ ನಿಯಂತ್ರಣ ರೇಖೆ ಬಳಿಯ ಲುಂಗ್ಟಾ ಜೋರ್‌ ಪ್ರದೇಶಕ್ಕೆ ಚಾರಣಕ್ಕೆ ತೆರಳಿದ್ದ ವೇಳೆ ಚೀನಾ ಸೇನೆಯು ಮಿರಾಮ್‌ ಅವರನ್ನು ಅಪಹರಿಸಿತ್ತು. ಈ ವೇಳೆ ಅಲ್ಲಿಂದ ತಪ್ಪಿಸಿಕೊಂಡ ಯಾಯಿಂಗ್‌ ವಿಷಯವನ್ನು ಅಧಿಕಾರಿಗಳಿಗೆ ತಿಳಿಸಿದ್ದ.ಜನವರಿ 27 ರಂದು ಅಂಜಾವ್ ಜಿಲ್ಲೆಯ ಕಿಬಿತು ಎಂಬಲ್ಲಿನ ವಾಚಾ-ದಮೈ ಸ್ಥಳದಲ್ಲಿ ಚೀನಾ ಸೇನೆ ಯುವಕನನ್ನು ಭಾರತೀಯ ಸೇನೆಗೆ ಹಸ್ತಾಂತರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT