ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

100 ಕೋಟಿ ಡೋಸ್ ಕೋವಿಡ್‌ ಲಸಿಕೆ: ಹೆಮ್ಮೆಯ ಕ್ಷಣ ಎಂದ ಅಮಿತ್‌ ಶಾ

Last Updated 21 ಅಕ್ಟೋಬರ್ 2021, 9:49 IST
ಅಕ್ಷರ ಗಾತ್ರ

ನವದೆಹಲಿ: ದೇಶದಾದ್ಯಂತ100 ಕೋಟಿ ಡೋಸ್ ಕೋವಿಡ್‌-19 ಲಸಿಕೆ ವಿತರಿಸಿರುವುದು ʼಐತಿಹಾಸಿಕ ಮತ್ತು ಹೆಮ್ಮೆಯ ಕ್ಷಣʼ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸಂತಸ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಸರಣಿ ಟ್ವೀಟ್‌ಗಳನ್ನು ಮಾಡಿರುವ ಶಾ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ದೂರದೃಷ್ಟಿಯ ನಾಯಕತ್ವ ಮತ್ತು ನಿರಂತರ ಪ್ರೋತ್ಸಾಹದಿಂದಾಗಿ ನೂರು ಕೋಟಿ ಡೋಸ್‌ ಕೋವಿಡ್-19‌ ಲಸಿಕೆ ವಿತರಣೆಯ ಗುರಿ ಸಾಧಿಸಿದ್ದೇವೆ. ಆ ಮೂಲಕ ದಾಖಲೆ ಬರೆದಿರುವುದು ಐತಿಹಾಸಿಕ ಮತ್ತು ಹೆಮ್ಮೆಯ ಕ್ಷಣವಾಗಿದೆ. ಇದು ಅಸಾಧಾರಣ ಸಾಮರ್ಥ್ಯದೊಂದಿಗೆ ನವ ಭಾರತವನ್ನು ಜಗತ್ತಿಗೆ ಮತ್ತೊಮ್ಮೆ ಪರಿಚಯಿಸಿದೆ ಎಂದು ತಿಳಿಸಿದ್ದಾರೆ.

ಈ ಮೈಲುಗಲ್ಲು ಮುಟ್ಟಲು ನೆರವಾದ ದೇಶದ ಎಲ್ಲ ವಿಜ್ಞಾನಿಗಳು, ಸಂಶೋದಕರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ʼಈ ಐತಿಹಾಸಿಕ ಕ್ಷಣದಲ್ಲಿ ಇಡೀ ದೇಶವನ್ನು ಅಭಿನಂದಿಸುತ್ತೇನೆ. ಹಲವು ಸವಾಲುಗಳನ್ನು ಮೀರಿ ದೊಡ್ಡ ಕಾರ್ಯ ಸಾಧಿಸಲು ಕೊಡುಗೆ ನೀಡಿದ್ದಕ್ಕಾಗಿ ಎಲ್ಲ ವಿಜ್ಞಾನಿಗಳು, ಸಂಶೋದಕರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಧನ್ಯವಾದ ತಿಳಿಸುತ್ತೇನೆ. ಪ್ರತಿಯೊಬ್ಬ ವ್ಯಕ್ತಿಯ ಆರೋಗ್ಯ ಮತ್ತು ಸುರಕ್ಷತೆಕಡೆಗಿನಪ್ರಧಾನಿ ಮೋದಿ ಅವರ ಬದ್ದತೆಯನ್ನು ಅಭಿನಂದಿಸುತ್ತೇನೆʼ ಎಂದು ಹೇಳಿದ್ದಾರೆ.

ಮೊದಲ ಹತ್ತು ಕೋಟಿ ಡೋಸ್‌ ಲಸಿಕೆ ಪೂರೈಕೆಗೆ85 ದಿನಗಳು ಬೇಕಾಗಿದ್ದವು. ನಂತರದ 74ದಿನಗಳಲ್ಲಿ 20 ಕೋಟಿ ಡೋಸ್‌ ವಿತರಿಸಿ ಒಟ್ಟು ಲಸಿಕೆ ವಿತರಣೆ ಪ್ರಮಾಣವನ್ನು 30 ಕೋಟಿಗೆ ಹೆಚ್ಚಿಲಾಗಿತ್ತು.ನಂತರ, 30 ಕೋಟಿಯಿಂದ50 ಕೋಟಿ ಡೋಸ್‌ ಹಂಚಿಕೆಯ ಗುರಿ ಮುಟ್ಟಲು 44 ದಿನಗಳು ಸಾಕಾಗಿದ್ದವು. ಆಗಸ್ಟ್‌6 ರಂದು ಈ ಸಾಧನೆ ಮಾಡಲಾಗಿತ್ತು.

ʼನಂತರ 100 ಕೋಟಿ ಡೋಸ್‌ ಲಸಿಕೆ ವಿತರಣೆಯ ಗುರಿ ತಲುಪಲು 76 ದಿನಗಳನ್ನು ತೆಗೆದುಕೊಂಡಿದೆʼ ಎಂದೂ ಮಾಹಿತಿ ನೀಡಿದ್ದಾರೆ.

ಅತಿಹೆಚ್ಚು ಡೋಸ್‌ ಲಸಿಕೆ ವಿತರಿಸಿದ ರಾಜ್ಯಗಳ ಪಟ್ಟಿಯಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಗುಜರಾತ್‌ ಮತ್ತು ಮಧ್ಯಪ್ರದೇಶ ರಾಜ್ಯಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT