ಮಂಗಳವಾರ, ಸೆಪ್ಟೆಂಬರ್ 28, 2021
24 °C

ತೆಲಂಗಾಣದ ಹೆದ್ದಾರಿ ಯೋಜನೆ: ಅದಾನಿ ಗ್ರೂಪ್‌ಗೆ ₹ 1,040 ಕೋಟಿ ಮೊತ್ತದ ಗುತ್ತಿಗೆ‌

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ತೆಲಂಗಾಣದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಹೆದ್ದಾರಿ ಯೋಜನೆಯನ್ನು ₹1,039.90 ಕೋಟಿಗೆ ತನ್ನದಾಗಿಸಿಕೊಂಡಿರುವುದಾಗಿ ಅದಾನಿ ರೋಡ್‌ ಟ್ರಾನ್ಸ್‌ಪೋರ್ಟ್‌ ಲಿಮಿಟೆಡ್‌ (ಎಆರ್‌ಟಿಎಲ್‌) ಬುಧವಾರ ತಿಳಿಸಿದೆ.

'ಗುತ್ತಿಗೆದಾರರಿಗೆ ನೀಡುವ ಒಪ್ಪಿಗೆ ಪತ್ರವನ್ನು (ಎಲ್‌ಒಎ) ಎಆರ್‌ಟಿಎಲ್‌ ಪಡೆದಿದೆ. ತೆಲಂಗಾಣದಲ್ಲಿ ಕೊದಾಡ್‌ನಿಂದ ಖಮ್ಮಂ ವರೆಗೂ ನಾಲ್ಕು ಪಥದ ಎನ್‌ಎಚ್‌–365ಎ ರಸ್ತೆ ನಿರ್ಮಾಣಕ್ಕೆ ಭಾರತಮಾಲಾ ಪರಿಯೋಜನಾ ಅಡಿಯಲ್ಲಿ ಯೋಜನೆಯ ಗುತ್ತಿಗೆ ದೊರೆತಿದೆ' ಎಂದು ಕಂಪನಿಯು ಮುಂಬೈ ಷೇರುಪೇಟೆಗೆ ಮಾಹಿತಿ ಸಲ್ಲಿಸಿದೆ.

ಯೋಜನೆಯ ಬಿಡ್‌ ಮೊತ್ತ ₹ 1,039.90 ಕೋಟಿ ಎಂದು ಕಂಪನಿ ಹೇಳಿದೆ. ಯೋಜನೆಯ ನಿರ್ಮಾಣದ ಅವಧಿ ಎರಡು ವರ್ಷಗಳು ಹಾಗೂ ಕಾರ್ಯಾಚರಣೆಯ ಅವಧಿ 15 ವರ್ಷಗಳು ಎಂದು ತಿಳಿಸಿದೆ.

ಎಆರ್‌ಟಿಎಲ್‌, ಅದಾನಿ ಗ್ರೂಪ್‌ನ ಭಾಗವಾಗಿರುವ ಅದಾನಿ ಎಂಟರ್‌ಪ್ರೈಸಸ್‌ ಲಿಮಿಟೆಡ್‌ನ (ಎಇಎಲ್‌) ಅಂಗಸಂಸ್ಥೆಯಾಗಿದೆ.

ಈ ಯೋಜನೆಯ ಮೂಲಕ ಅದಾನಿ ಗ್ರೂಪ್‌, ಎನ್‌ಎಚ್‌ಎಐನ ಒಟ್ಟು ಎಂಟು ರಸ್ತೆ ಯೋಜನೆಗಳನ್ನು ತನ್ನದಾಗಿಸಿಕೊಂಡಂತಾಗಿದೆ. ಅದಾನಿ ಗ್ರೂಪ್‌ ಛತ್ತೀಸ್‌ಗಢ, ತೆಲಂಗಾಣ, ಆಂಧ್ರ ಪ್ರದೇಶ, ಮಧ್ಯ ಪ್ರದೇಶ, ಕೇರಳ ಹಾಗೂ ಗುಜರಾತ್‌ನಲ್ಲಿ ಟೋಲ್‌ ಕಾರ್ಯಾಚರಣೆಯನ್ನೂ ನಡೆಸುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು