ಗುರುವಾರ , ಅಕ್ಟೋಬರ್ 21, 2021
24 °C

ಆಮ್ಲಜನಕದ ಹೆಸರಲ್ಲಿ ವಿಪಕ್ಷಗಳು 'ಬ್ಲ್ಯಾಕ್ ಮೇಲ್' ಮಾಡಿದವು: ಯೋಗಿ

ಪಿಟಿಐ Updated:

ಅಕ್ಷರ ಗಾತ್ರ : | |

ಕಾನ್ಪುರ: ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ವಿರೋಧ ಪಕ್ಷಗಳ ಆಡಳಿತವಿರುವ ರಾಜ್ಯಗಳು ವೈದ್ಯಕೀಯ ಆಮ್ಲಜನಕದ ಕೊರತೆಯನ್ನು ಹೇಳಿಕೊಂಡು 'ಬ್ಲ್ಯಾಕ್ ಮೇಲ್' ಮಾಡಿದವು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸೋಮವಾರ ಆರೋಪಿಸಿದ್ದಾರೆ.

ಕಾನ್ಪುರದ ಐಐಟಿಯಲ್ಲಿ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರವು ಆಮ್ಲಜನಕ ಬಳಕೆ ಕುರಿತಂತೆ ಲೆಕ್ಕಪರಿಶೋಧನೆಗೆ ಆದೇಶಿಸಿದ ಬಳಿಕ ಜೀವ ಉಳಿಸುವ ಅನಿಲದ ಬೇಡಿಕೆ ‘ಅರ್ಧಕ್ಕೆ ಇಳಿದಿದೆ’ ಎಂದು ಹೇಳಿದ್ದಾರೆ.

‘ವಿವಿಧ ರಾಜ್ಯಗಳು ಆಮ್ಲಜನಕಕ್ಕಾಗಿ ಒತ್ತಾಯಿಸುತ್ತಿದ್ದದ್ದನ್ನು ನೀವು ನೋಡಿರಬಹುದು. ಕೇಂದ್ರವು ಆಮ್ಲಜನಕದ ಲೆಕ್ಕಪರಿಶೋಧನೆಯನ್ನು ಘೋಷಿಸಿದ ತಕ್ಷಣ, ಅವರ ಬೇಡಿಕೆ ಅರ್ಧಕ್ಕೆ ಕುಸಿಯಿತು. ಬಿಕ್ಕಟ್ಟಿನ ಸಂದರ್ಭದಲ್ಲಿ ಅವರು ಪೊಲಿಟಿಲಿಕಲ್ ಬ್ಲಾಕ್‌ಮೇಲ್ ಮಾರ್ಗ ಅನುಸರಿಸಿದರು’ ಎಂದು ಆದಿತ್ಯನಾಥ್ ಆರೋಪಿಸಿದರು.

ದೇಶದ ಕಲ್ಲಿದ್ದಲು ಕೊರತೆ ಪರಿಸ್ಥಿತಿಯನ್ನು ಕೊರೊನಾ ಬಿಕ್ಕಟ್ಟಿನ ಸಂದರ್ಭದ ಆಮ್ಲಜನಕದ ಕೊರತೆಗೆ ಹೋಲಿಸಿ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿಕೆ ನೀಡಿದ ಬೆನ್ನಲ್ಲೇ ಆದಿತ್ಯನಾಥ್ ವಿರೋಧ ಪಕ್ಷಗಳ ವಿರುದ್ಧ ಕಿಡಿಕಾರಿದ್ದಾರೆ.

ಕಲ್ಲಿದ್ದಲು ಬಿಕ್ಕಟ್ಟು ಇದೆ ಎಂದು ಒಪ್ಪಿಕೊಳ್ಳಲು ಕೇಂದ್ರ ಸಿದ್ಧವಿಲ್ಲ ಎಂದು ಸಿಸೋಡಿಯಾ ಆರೋಪಿಸಿದ್ದರು.

ಕಾರ್ಯಕ್ರಮದಲ್ಲಿ ಸರ್ಕಾರದ ಹಲವಾರು ಸಾಧನೆಗಳನ್ನು ಬಿಚ್ಚಿಟ್ಟ ಆದಿತ್ಯನಾಥ್, ಸೋಮವಾರ ಉತ್ತರ ಪ್ರದೇಶದಲ್ಲಿ ಪತ್ತೆಯಾದ 13 ಕೋವಿಡ್ -19 ರೋಗಿಗಳು ಮಹಾರಾಷ್ಟ್ರ, ಕೇರಳ ಅಥವಾ ಪಶ್ಚಿಮ ಬಂಗಾಳದಿಂದ ಬಂದವರು ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು