ಕೇರಳ ಚಲನಚಿತ್ರ ಮಂಡಳಿ ಮುಖ್ಯಸ್ಥ ಸ್ಥಾನಕ್ಕೆ ಅಡೂರ್ ಗೋಪಾಲಕೃಷ್ಣನ್ ರಾಜೀನಾಮೆ

ತಿರುವನಂತಪುರ: ಖ್ಯಾತ ನಿರ್ದೇಶಕ ಅಡೂರ್ ಗೋಪಾಲಕೃಷ್ಣನ್ ಅವರು ಮಂಗಳವಾರ ಕೆ. ಆರ್. ನಾರಾಯಣನ್ ರಾಷ್ಟ್ರೀಯ ದೃಶ್ಯ ವಿಜ್ಞಾನ ಮತ್ತು ಕಲಾ ಸಂಸ್ಥೆಯ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ.
ಸಂಸ್ಥೆಯ ನಿರ್ದೇಶಕ ಶಂಕರ್ ಮೋಹನ್ ಅವರ ವಿರುದ್ಧ ಕೆಲವು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಜಾತಿ ತಾರತಮ್ಯದ ಆರೋಪ ಮಾಡಿದ ಹಿನ್ನೆಲೆಯಲ್ಲಿ ಮೋಹನ್ ಅವರು ಸೋಮವಾರ ರಾಜೀನಾಮೆ ಸಲ್ಲಿಸಿದ್ದರು.
ಈ ಬೆನ್ನಲ್ಲೇ ಪತ್ರಿಕಾಗೋಷ್ಠಿ ಕರೆದು ರಾಜೀನಾಮೆ ಘೋಷಿಸಿದ ಗೋಪಾಲಕೃಷ್ಣನ್ ಅವರು, ‘ಮೋಹನ್ ಅವರು ಕಳೆದ ನಾಲ್ಕು ದಶಕಗಳಲ್ಲಿ ಹಲವು ಸರ್ಕಾರಿ ಸಂಸ್ಥೆಗಳ ಚುಕ್ಕಾಣಿ ಹಿಡಿದಿರುವ ಗೌರವಾನ್ವಿತರು ಮತ್ತು ವೃತ್ತಿಪರರು. ಸಂಸ್ಥೆಯನ್ನು ಅಧಃಪತನದ ಅಂಚಿನಿಂದ ಹೊರತರಲು ಮತ್ತು ಅದನ್ನು ದೇಶದ ಅತ್ಯುತ್ತಮ ಚಲನಚಿತ್ರ ಸಂಸ್ಥೆಗಳಲ್ಲಿ ಒಂದನ್ನಾಗಿ ಮಾಡಲು ಕಳೆದ ಮೂರು ವರ್ಷಗಳಲ್ಲಿ ಶ್ರದ್ಧೆಯಿಂದ ಕೆಲಸ ಮಾಡಿದ್ದಾರೆ. ಇವರ ವಿರುದ್ಧ ಆಧಾರರಹಿತ, ಸುಳ್ಳು ಆರೋಪ ಮಾಡಿ ಬಲವಂತವಾಗಿ ಹುದ್ದೆಯಿಂದ ಕೆಳಗಿಳಿಯುವಂತೆ ಮಾಡಿ ಅವಮಾನಿಸಲಾಗಿದೆ’ ಎಂದು ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.