ಮಂಗಳವಾರ, ಸೆಪ್ಟೆಂಬರ್ 28, 2021
21 °C

ತಾಲಿಬಾನ್‌ ನಿಯಂತ್ರಿಸಲು: ಅಫ್ಗಾನಿಸ್ತಾನದಲ್ಲಿ ರಾತ್ರಿ ಕರ್ಫ್ಯೂ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಕಾಬೂಲ್‌: ಅಫ್ಗಾನಿಸ್ತಾನದಲ್ಲಿ ತಾಲಿಬಾನ್‌ನಿಂದಾಗಿ ಹೆಚ್ಚುತ್ತಿರುವ ಹಿಂಸಾಚಾರವನ್ನು ನಿಯಂತ್ರಿಸಲು ಶನಿವಾರದಿಂದ 34 ಪ್ರಾಂತ್ಯಗಳ ಪೈಕಿ 31ರಲ್ಲಿ ರಾತ್ರಿ ಕರ್ಫ್ಯೂ ವಿಧಿಸಲಾಗಿದೆ.

ತಾಲಿಬಾನ್‌ ಚಟುವಟಿಕೆಗಳನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಈ ಕ್ರಮಕೈಗೊಳ್ಳಲಾಗಿದೆ. ಕಾಬೂಲ್‌, ಪಂಜಶಿರ್‌ ಮತ್ತು ನಂಗರ್‌ಹಾರ್‌ನಲ್ಲಿ ಮಾತ್ರ ಕರ್ಫ್ಯೂ ಜಾರಿಗೊಳಿಸಿಲ್ಲ ಎಂದು ಗೃಹ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಪ್ರಮುಖ ಗಡಿ ಸ್ಥಳಗಳನ್ನು ತಾಲಿಬಾನ್‌ ವಶಪಡಿಸಿಕೊಂಡಿದೆ. ತಾಲಿಬಾನ್ ಈಗ ಅಫ್ಗಾನಿಸ್ತಾನದ ಬಹುತೇಕ ಅರ್ಧದಷ್ಟು ಪ್ರದೇಶವನ್ನು ವಶಪಡಿಸಿಕೊಂಡಿದ್ದು, ಸುಮಾರು 400 ಜಿಲ್ಲೆಗಳಲ್ಲಿ ಪ್ರಾಬಲ್ಯ ಸಾಧಿಸಿದೆ.

ಕಳೆದ ಎರಡು ದಿನಗಳಿಂದ ತಾಲಿಬಾನ್‌ ಮತ್ತು ಅಫ್ಗಾನಿಸ್ತಾನ ಪಡೆಗಳ ನಡುವೆ ಸಂಘರ್ಷ ಮತ್ತೆ ತೀವ್ರವಾಗಿದೆ. ಕಳೆದ 24 ಗಂಟೆಗಳಲ್ಲಿ 260ಕ್ಕೂ ಹೆಚ್ಚು ತಾಲಿಬಾನ್‌ ಉಗ್ರರನ್ನು ಹತ್ಯೆ ಮಾಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು