ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಬೂಲ್‌ನಲ್ಲಿ ಬಾಂಬ್ ದಾಳಿ ನಡೆಸಿದ ಐಎಸ್‌-ಕೆ ಭಾರತದತ್ತ

Last Updated 28 ಆಗಸ್ಟ್ 2021, 6:03 IST
ಅಕ್ಷರ ಗಾತ್ರ

ನವದೆಹಲಿ: ‘ಕಾಬೂಲ್ ವಿಮಾನ ನಿಲ್ದಾಣದಲ್ಲಿ ಬಾಂಬ್ ದಾಳಿ ನಡೆಸಿದ ಇಸ್ಲಾಮಿಕ್ ಸ್ಟೇಟ್-ಖೋರಸಾನ್‌ (ಐಎಸ್‌-ಕೆ) ಘಟಕವು ಮುಂದಿನ ದಿನಗಳಲ್ಲಿ ಭಾರತದಲ್ಲೂ ನೆಲೆಯೂರುವ ಯೋಜನೆ ಹಾಕಿಕೊಂಡಿದೆ. ಆ ಮೂಲಕ ಭಾರತದಲ್ಲೂ ಇಸ್ಲಾಂ ರಾಷ್ಟ್ರ ಸ್ಥಾಪನೆಯ ಗುರಿ ಹೊಂದಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ’ ಎಂದು ಎನ್‌ಡಿಟಿವಿ ವರದಿ ಮಾಡಿದೆ.

2015ರಿಂದ ಸಕ್ರಿಯವಾಗಿರುವ ಈ ಘಟಕವು ಈಗ ಮಧ್ಯ ಏಷ್ಯಾದ ದೇಶಗಳಲ್ಲಿ ತನ್ನ ನೆಲೆಯನ್ನು ಊರಲು ಯತ್ನಿಸುತ್ತಿದೆ. ಈಗಾಗಲೇ ಮಧ್ಯ ಏಷ್ಯಾದ ದೇಶಗಳಿಗೆ ಈ ಘಟಕದ ಉಗ್ರರು ನುಸುಳಿದ್ದಾರೆ. ಅಲ್ಲೆಲ್ಲಾ ಗಟ್ಟಿಯಾಗಿ ನೆಲೆಯೂರಿದ ನಂತರ, ಭಾರತಕ್ಕೂ ತಮ್ಮ ಕಾರ್ಯಾಚರಣೆ ವಿಸ್ತರಿಸಲು ಯೋಜನೆ ಹಾಕಿಕೊಂಡಿದ್ದಾರೆ.

ಈ ಘಟಕವು ಈಗಾಗಲೇ ಪಾಕಿಸ್ತಾನದ ಜೈಶ್‌-ಎ-ಮೊಹಮ್ಮದ್ ಸೇರಿದಂತೆ ಹಲವು ಉಗ್ರ ಸಂಘಟನೆಗಳ ಜತೆಗೆ ಸಖ್ಯ ಬೆಳೆಸಿದೆಎಂದು ಗುಪ್ತಚರ ಇಲಾಖೆ ಹೇಳಿದೆ ಎಂದು ಎನ್‌ಡಿಟಿವಿ ವಿವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT