ಶುಕ್ರವಾರ, ಸೆಪ್ಟೆಂಬರ್ 24, 2021
27 °C

ಭಾರತದಲ್ಲಿ ಆಶ್ರಯ ಪಡೆಯಲು 736 ಅಫ್ಗನ್ನರಿಂದ ಹೊಸದಾಗಿ ಅರ್ಜಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಆಗಸ್ಟ್‌ 1 ರಿಂದ ಸೆಪ್ಟೆಂಬರ್ 11ರ ವರೆಗೆ ಒಟ್ಟು 736 ಅ‌ಫ್ಗಾನಿಸ್ತಾನದ ಪ್ರಜೆಗಳು ಭಾರತದಲ್ಲಿ ಆಶ್ರಯ ಕೇಳಿ ಅರ್ಜಿ ಸಲ್ಲಿಸಿದ್ದಾರೆ ಎಂದು ವಿಶ್ವಸಂಸ್ಥೆಯ ಅಂಗ ಸಂಸ್ಥೆಯಾದ ನಿರಾಶ್ರಿತರ ಹೈಕಮಿಷನರ್‌ ಕಚೇರಿ (ಯುಎನ್‌ಎಚ್‌ಸಿಆರ್‌) ಹೇಳಿಕೆ ತಿಳಿಸಿದೆ.

ಭಾರತದಲ್ಲಿ ಆಶ್ರಯಕ್ಕಾಗಿ ಹಾಗೂ ನೆರವು ಕೇಳಿ ಅರ್ಜಿಸಲ್ಲಿಸುವ ಅಫ್ಗನ್ನರ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆ ಇದೆ ಎಂದು ಸಂಸ್ಥೆ ತಿಳಿಸಿದೆ.

ಅಫ್ಗನ್‌ ಪ್ರಜೆಗಳಿಗೆ, ವೀಸಾ ಪೂರೈಕೆ ಮತ್ತು ಇರುವ ವೀಸಾ ಅವಧಿಯ ವಿಸ್ತರಣೆಗೆ ನೆರವಾಗುವುದು ಸೇರಿದಂತೆ ಹಲವು ಪರಿಹಾರ ಕಾರ್ಯಗಳ ಕುರಿತು ಭಾರತ ಸರ್ಕಾರದೊಂದಿಗೆ ನಿರಂತರವಾಗಿ ಮಾತುಕತೆ ನಡೆಸುತ್ತಿದ್ದೇವೆ ಎಂದು ಯುಎನ್‌ಎಚ್‌ಸಿಆರ್‌ ತಿಳಿಸಿದೆ.

ಸದ್ಯ ಲಭ್ಯ ಮಾಹಿತಿ ಪ್ರಕಾರ, ಭಾರತದಲ್ಲಿ ಯುಎನ್‌ಎಚ್‌ಸಿಆರ್‌ ಮೂಲಕ ಭಾರತದಲ್ಲಿ ಆಶ್ರಯ ಪಡೆದಿರುವವರ ಸಂಖ್ಯೆ 43,157 . ಇವರಲ್ಲಿ ನಿರಾತ್ರಿತರು ಹಾಗೂ ಅಫ್ಗಾನಿಸ್ತಾನದಿಂದ ವಲಸೆ ಬಂದು ಆಶ್ರಯ ಪಡೆದವರು 15,559  ಮಂದಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು