ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳದಲ್ಲಿ ಆಫ್ರಿಕನ್ ಹಂದಿ ಜ್ವರ ಪ್ರಕರಣ ಪತ್ತೆ

Last Updated 1 ಆಗಸ್ಟ್ 2022, 13:07 IST
ಅಕ್ಷರ ಗಾತ್ರ

ವಯನಾಡು/ಕಣ್ಣೂರು: ಕೇರಳದ ವಯನಾಡು ಹಾಗೂ ಕಣ್ಣೂರು ಜಿಲ್ಲೆಗಳಲ್ಲಿ ಆಫ್ರಿಕನ್‌ ಹಂದಿ ಜ್ವರದತಲಾ ಒಂದು ಹೊಸ ಪ್ರಕರಣ ಪತ್ತೆಯಾಗಿದೆ.

‘ವಯನಾಡು ಜಿಲ್ಲೆಯ ನೆನ್‌ಮೆನಿ ಗ್ರಾಮದಲ್ಲಿ ಸೋಮವಾರ ಪ್ರಕರಣವೊಂದು ಪತ್ತೆಯಾಗಿದೆ. ಆಫ್ರಿಕನ್‌ ಹಂದಿ ಜ್ವರ ಪಸರಿಸದಂತೆ ತಡೆಯಲು ನೆನ್‌ಮೆನಿ ಫಾರಂ ಸುತ್ತಲಿನ ಪ್ರದೇಶಗಳಲ್ಲಿರುವ 193 ಹಂದಿಗಳನ್ನು ಈ ವಾರ ಕೊಲ್ಲಲಾಗುತ್ತದೆ. ವಯನಾಡಿನ 222 ಫಾರಂಗಳಲ್ಲಿ ಸುಮಾರು 20 ಸಾವಿರ ಹಂದಿಗಳನ್ನು ಸಾಕಲಾಗುತ್ತಿದೆ. ಅವುಗಳಿಂದ ಮಾದರಿಗಳನ್ನು ಸಂಗ್ರಹಿಸಿ ‍ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತದೆ’ ಎಂದು ವಯನಾಡು ಜಿಲ್ಲೆ ಪಶುಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ.ರಾಜೇಶ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT