ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಹಮದಾಬಾದ್ ಸರಣಿ ಸ್ಫೋಟ: 13 ವರ್ಷದ ಬಳಿಕ ವಿಚಾರಣೆ ಪೂರ್ಣ

Last Updated 3 ಸೆಪ್ಟೆಂಬರ್ 2021, 11:39 IST
ಅಕ್ಷರ ಗಾತ್ರ

ಅಹಮದಾಬಾದ್: ಅಹಮದಾಬಾದ್‌ನಲ್ಲಿ 56 ಜನರು ಮೃತಪಟ್ಟಿದ್ದ ಸರಣಿ ಬಾಂಬ್‌ ಸ್ಫೋಟ ಪ್ರಕರಣದ ವಿಚಾರಣೆ
ಯನ್ನು 13 ವರ್ಷದ ನಂತರ ಕೋರ್ಟ್‌ ಪೂರ್ಣಗೊಳಿಸಿದೆ. 78 ಮಂದಿ ಪ್ರಕರಣದ ಆರೋಪಿಗಳಾಗಿದ್ದಾರೆ.

ವಿಶೇಷ ಕೋರ್ಟ್‌ನ ನ್ಯಾಯಾಧೀಶರಾದ ಅಂಬಲಾಲ್ ಪಟೇಲ್‌ ಅವರು, ಗುರುವಾರ ಅಂತಿಮ ವಿಚಾರಣೆಯನ್ನು ಪೂರ್ಣಗೊಳಿಸಿದ್ದು, ಸೆಪ್ಟೆಂಬರ್ 13ರಂದು ತೀರ್ಪು ಪ್ರಕಟಿಸುವವ ಸಂಭವವಿದೆ.

ಆರೋಪಿಗಳಲ್ಲಿ ಇಬ್ಬರು ಚಿಕಿತ್ಸೆಗಾಗಿ ಜಾಮೀನು ಪಡೆದು ಬಿಡುಗಡೆ ಆಗಿದ್ದರು. ಉಳಿದವರು ಬಂಧನದ ದಿನದಿಂದ ಈವರೆಗೂ ವಿಚಾರಣಾಧೀನ ಕೈದಿಗಳಾಗಿ ಜೈಲಿನಲ್ಲಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿಯೇ ಇದು ಸುದೀರ್ಘ ಕಾಲ ನಡೆದ ವಿಚಾರಣೆ ಪ್ರಕರಣ ಎಂದು ಹೇಳಲಾಗಿದೆ. ಅಂತಿಮ ಹಂತದ ಮೌಖಿಕ ವಿಚಾರಣೆಯ 9 ತಿಂಗಳು ನಡೆಯಿತು. ಆರೋಪಿಗಳ ಪರ ವಕೀಲರು ಆರು ತಿಂಗಳು ಮತ್ತು ಸರ್ಕಾರದ ಪರ ವಕೀಲರು ಉಳಿದ ಅವಧಿ ವಾದ ಮಂಡಿಸಿದರು.

ಜುಲೈ 26, 2008ರಂದು ಸರಣಿ ಬಾಂಬ್‌ ಸ್ಫೋಟ ನಡೆದಿದ್ದು, 56 ಜನ ಮೃತಪಟ್ಟಿದ್ದು, 200 ಮಂದಿ ಗಾಯ
ಗೊಂಡಿದ್ದರು. ಪೊಲೀಸರು ಅಹಮದಾಬಾದ್‌ನಲ್ಲಿ 20, ಸೂರತ್‌ನಲ್ಲಿ 15 ಎಫ್‌ಐಆರ್‌ ದಾಖಲಿಸಿದ್ದರು.

ಬಾಂಬ್‌ ಸ್ಫೋಟ ಪ್ರಕರಣವು ಇಂಡಿಯನ್‌ ಮುಜಾಹಿದ್ದೀನ್‌ ತಂಡದ ಸಂಚಿನ ಭಾಗವಾಗಿದೆ ಎಂದು ಪೊಲೀಸರು ತನಿಖೆಯ ನಂತರ ಹೇಳಿದ್ದರು. ಎಲ್ಲ ಪ್ರಕರಣಗಳನ್ನು ಒಟ್ಟಾಗಿ ವಿಚಾರಣೆ ನಡೆಸಲಾಗಿತ್ತು.

ಆರೋಪಿಗಳಲ್ಲಿ ಸಿಮಿಯ ಮಾಜಿ ಮುಖ್ಯಸ್ಥ ಸಫ್ದರ್ ನಗೋರಿ ಇದ್ದರು. ಅಹಮದಾಬಾದ್‌ನ ಡಿಸಿಬಿ ತನಿಖೆ ನಡೆಸಿದ್ದು, ಗೋಧ್ರಾದಲ್ಲಿ 2002ರಲ್ಲಿ ನಡೆದಿದ್ದ ಹಿಂಸಾಕೃತ್ಯಗಳಿಗೆ ಸೇಡಿನ ಕ್ರಮವಾಗಿ ಈ ಸರಣಿ ಬಾಂಬ್ ಸ್ಫೋಟವನ್ನು ನಡೆಸಲಾಗಿತ್ತು ಎಂದು ಪೊಲೀಸರು ಪ್ರತಿಪಾದಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT