ಭಾನುವಾರ, ಸೆಪ್ಟೆಂಬರ್ 26, 2021
21 °C

ಚೆನ್ನೈನಿಂದ ಹೈದರಾಬಾದ್‌ಗೆ ಅಪಾರ ಪ್ರಮಾಣದಲ್ಲಿ ರಾಸಾಯನಿಕ ಸಾಗಾಟ

ಪಿಟಿಐ Updated:

ಅಕ್ಷರ ಗಾತ್ರ : | |

ಚೆನ್ನೈ: ಚೆನ್ನೈನಿಂದ ಹೈದರಾಬಾದ್‌ಗೆ ಅಪಾರ ಪ್ರಮಾಣದಲ್ಲಿ ರಾಸಾಯನಿಕ ಸಾಗಿಸಲಾಗುತ್ತದೆ ಎಂದು ವರದಿಯಾಗಿದೆ. ಲೆಬನಾನ್‌ನ ಬೈರೂತ್‌ನಲ್ಲಿ ಅಮೋನಿಯಂ ನೈಟ್ರೇಟ್ ಸ್ಫೋಟ ಸಂಭವಿಸಿದ ಕಹಿ ನೆನಪು ಮಾಸುವ ಮುನ್ನವೇ ಈ ವಿಚಾರ ತಿಳಿದುಬಂದಿದೆ.

ರಾಸಾಯನಿಕವನ್ನು ಇ–ಹರಾಜು ಪ್ರಕ್ರಿಯೆ ಮೂಲಕ ಮಾರಾಟ ಮಾಡಲಾಗಿದ್ದು, ಹೈದರಾಬಾದ್‌ಗೆ ಸಾಗಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಸದ್ಯ 697 ಟನ್ ರಾಸಾಯನಿಕವನ್ನು ಚೆನ್ನೈಯಿಂದ 20 ಕಿಲೋ ಮೀಟರ್ ದೂರದಲ್ಲಿರುವ ಸರಕು ಸಾಗಣೆ ಕೇಂದ್ರದಲ್ಲಿ ಇರಿಸಲಾಗಿದೆ. ಇಲ್ಲಿಗೆ ಸಮೀಪದಲ್ಲಿ ಜನವಸತಿ ಪ್ರದೇಶವಿಲ್ಲ. ಕೆಲವೇ ದಿನಗಳಲ್ಲಿ ಇದರ ವಿಲೇವಾರಿ ಪ್ರಕ್ರಿಯೆ ನಡೆಯಲಿದೆ. ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗುತ್ತದೆ. ಕೆಲವು ಕಂಟೇನರ್‌ಗಳು ಈಗಾಗಲೇ ಹೈದರಾಬಾದ್‌ಗೆ ಪ್ರಯಾಣ ಬೆಳೆಸಿವೆ ಎಂದೂ ಮೂಲಗಳು ಹೇಳಿವೆ.

‘ಕಸ್ಟಮ್ಸ್ ಕಾಯ್ದೆ 1962’ರ ಅಡಿಯಲ್ಲಿ 2015ರಲ್ಲಿ ಈ ರಾಸಾಯನಿಕವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು.

ಈ ರಾಸಾಯನಿಕವನ್ನು ತಮಿಳುನಾಡು ಮೂಲದ ಆಮದುದಾರರಿಂದ ವಶಪಡಿಸಿಕೊಳ್ಳಲಾಗಿತ್ತು. ರಸಗೊಬ್ಬರ ದರ್ಜೆಯ ರಾಸಾಯನಿಕ ಎಂದು ಆಮದುದಾರರು ಹೇಳಿಕೊಂಡಿದ್ದರೂ ಇದು ಸ್ಫೋಟ ಸಾಧ್ಯತೆಯಿರುವ ರಾಸಾಯನಿಕವಾಗಿದೆ. ದಕ್ಷಿಣ ಕೊರಿಯಾದಿಂದ ಆಮದಾಗಿರುವ ರಾಸಾಯನಿಕದ ಅಪಾಯ ಸಾಧ್ಯತೆಯನ್ನು ಪರಿಗಣಿಸಿ ಸುರಕ್ಷಿತವಾಗಿ ಸಂಗ್ರಹಿಸಿಡಲಾಗಿದೆ. ಆಮದುದಾರರ ಪರವಾನಗಿಯನ್ನು ಅಂದೇ ರದ್ದುಪಡಿಸಲಾಗಿತ್ತು ಎಂದು ಮೂಲಗಳು ಹೇಳಿವೆ.

ಲೆಬನಾನ್‌ನ ಬೈರೂತ್‌ ಬಂದರಿನಲ್ಲಿ ಇತ್ತೀಚೆಗೆ ಸಂಭವಿಸಿದ್ದ ರಾಸಾಯನಿಕ ಸ್ಫೋಟದಲ್ಲಿ 135ಕ್ಕೂ ಹೆಚ್ಚು ಜನ ಮೃತಪಟ್ಟಿದ್ದರು.

ಇದನ್ನೂ ಓದಿ: ಬೈರೂತ್‌‌ ಸ್ಫೋಟ: 135ಕ್ಕೂ ಅಧಿಕ ಸಾವು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು