ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಾಖಂಡದ ಜೋಶಿಮಠದ ಹಲವೆಡೆ ಬಿರುಕು: ಕುಸಿದುಬಿದ್ದ ದೇವಸ್ಥಾನ

Last Updated 6 ಜನವರಿ 2023, 15:22 IST
ಅಕ್ಷರ ಗಾತ್ರ

ಜೋಶಿಮಠ: ಹಿಮಾಲಯದ ತಪ್ಪಲಿನ ರಾಜ್ಯ ಉತ್ತರಾಖಂಡದ ಜೋಶಿಮಠ ಎಂಬ ಒಂದಿಡೀ ಪ್ರದೇಶದ ಹಲವೆಡೆ ಬಿರುಕು ಕಾಣಿಸಿಕೊಂಡ ಕುರಿತು ವರದಿಯಾದ ಬೆನ್ನಲ್ಲೇ ದೇವಸ್ಥಾನವೊಂದು ಕುಸಿದುಬಿದ್ದಿದೆ. ಯಾವುದೇ ಪ್ರಾಣಾಪಾಯದ ವರದಿಯಾಗಿಲ್ಲ.

ಜೋಶಿಮಠದ ಹಲವು ರಸ್ತೆಗಳು ಮತ್ತು 500ಕ್ಕೂ ಹೆಚ್ಚು ಮನೆಗಳಲ್ಲಿ ಬಿರುಕು ಮೂಡಿರುವ ಹಿನ್ನೆಲೆ ದೇವಸ್ಥಾನ ಕುಸಿದು ಬಿದ್ದ ಸುದ್ದಿಯು ಭೀತಿಯನ್ನು ಹೆಚ್ಚಿಸಿದೆ.

ದೇವಸ್ಥಾನವು ಕಳೆದ 15 ದಿನಗಳಿಂದ ಬಿರುಕು ಬಿಟ್ಟ ಸ್ಥಿತಿಯಲ್ಲಿತ್ತು. ಕುಸಿದು ಬೀಳುವಾಗ ದೇವಸ್ಥಾನದ ಆಸುಪಾಸಿನಲ್ಲಿ ಯಾರೂ ಇರಲಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.

ಮುನ್ನೆಚ್ಚರಿಕೆಯ ಕ್ರಮವಾಗಿ ವಿಪತ್ತು ನಿಗ್ರಹ ದಳವು ಸುಮಾರು 50ಕ್ಕೂ ಹೆಚ್ಚು ಕುಟುಂಬಗಳನ್ನು ಸುರಕ್ಷಿತ ತಾಣಕ್ಕೆ ಸ್ಥಳಾಂತರಿಸಿದೆ.

ವಿಷ್ಣು ಪ್ರಯಾಗ ಜಲ ವಿದ್ಯುತ್‌ ಕಾಮಗಾರಿ ಸಿಬ್ಬಂದಿಗಳು ನೆಲೆಸಿರುವ 60ಕ್ಕೂ ಹೆಚ್ಚು ಕುಟುಂಬಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗುವುದು ಎಂದು ವಿಪತ್ತು ನಿಗ್ರಹ ದಳದ ನಿರ್ದೇಶಕ ಪಂಕಜ್‌ ಚೌಹಾಣ್‌ ತಿಳಿಸಿದ್ದಾರೆ.

ಚಾರ್‌ಧಾಮ್‌ ರಸ್ತೆ ಮತ್ತು ಎನ್‌ಟಿಪಿಸಿಯ ಹೈಡೆಲ್‌ ಯೋಜನೆ ಸೇರಿದಂತೆ ಹಲವು ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗಿದೆ. ಔಲಿ ರೋಪ್‌ವೇ ಸೇವೆಯನ್ನು ನಿಲ್ಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT