ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ವರ್ಷಗಳ ನಂತರ ಅಗರ್ತಲಾ –ಢಾಕಾ–ಕೋಲ್ಕತ್ತಾ ಬಸ್‌ ಸೇವೆ ಪುನರಾರಂಭ

Last Updated 26 ಏಪ್ರಿಲ್ 2022, 12:29 IST
ಅಕ್ಷರ ಗಾತ್ರ

ಅಗರ್ತಲಾ: ಢಾಕಾ ಮೂಲಕ ಸಂಚಾರ ಕೈಗೊಳ್ಳಲಿರುವ ಅಗರ್ತಲಾ–ಕೋಲ್ಕತ್ತಾ ಬಸ್‌ ಸೇವೆಯು ಎರಡು ವರ್ಷಗಳ ನಂತರ ಮಂಗಳವಾರದಿಂದ ಪುನರಾರಂಭಗೊಂಡಿದೆ ಎಂದು ತ್ರಿಪುರ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಜೇಶ್‌ ಕುಮಾರ್‌ ದಾಸ್‌ ತಿಳಿಸಿದರು.

ಕೋವಿಡ್‌ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ 2020ರ ಮಾರ್ಚ್‌ನಿಂದ ಈ ಬಸ್‌ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.

‘ಬಸ್‌ ಟಿಕೇಟ್‌ಗಳ ಮಾರಾಟ ಪ್ರಾರಂಭವಾಗಿದೆ. ಅಗರ್ತಲಾ–ಢಾಕಾ–ಕೋಲ್ಕತ್ತಾಗೆ ಪ್ರಯಾಣ ಮಾಡಬಯಸುವ ಪ್ರಯಾಣಿಕರು, ಮಾನ್ಯತೆ ಹೊಂದಿದ ಪಾಸ್‌ಪೋರ್ಟ್‌ ಹಾಗೂ ಪ್ರಯಾಣ ವೀಸಾವನ್ನು ಹೊಂದಿರಬೇಕು’ ಎಂದು ರಾಜೇಶ್‌ ಕುಮಾರ್‌ ದಾಸ್‌ ತಿಳಿಸಿದರು.

ಈ ಸಂಚಾರ ಸೌಲಭ್ಯವು ಶುಕ್ರವಾರ ಹೊರತುಪಡಿಸಿ, ವಾರದ ಆರು ದಿನಗಳಲ್ಲಿ ಲಭ್ಯವಿದೆ. 500 ಕಿ.ಮೀ ಸಂಚಾರದ ಪ್ರಯಾಣಕ್ಕೆ ₹2,300 ದರ ನಿಗದಿಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT