ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗಸ್ಟಾ ವೆಸ್ಟ್‌ಲ್ಯಾಂಡ್ ಹಗರಣ: ನಿವೃತ್ತ ಬ್ರಿಗೆಡಿಯರ್‌ ಆರೋಪಮುಕ್ತ

Last Updated 25 ಅಕ್ಟೋಬರ್ 2022, 13:39 IST
ಅಕ್ಷರ ಗಾತ್ರ

ನವದೆಹಲಿ : ಅಗಸ್ಟಾ ವೆಸ್ಟ್‌ಲ್ಯಾಂಡ್‌ ಹೆಲಿಕಾಪ್ಟರ್‌ ಹಗರಣದಲ್ಲಿ ಭ್ರಷ್ಟಾಚಾರದ ಆರೋಪ ಎದುರಿಸುತ್ತಿದ್ದ ನಿವೃತ್ತ ಬ್ರಿಗೆಡಿಯರ್‌ ವಿ.ಎಸ್‌. ಸೈನಿ ಅವರನ್ನು ಕೇಂದ್ರ ತನಿಖಾ ತಂಡ (ಸಿಬಿಐ) ಆರೋಪಮುಕ್ತಗೊಳಿಸಿದೆ.

ಸೈನಿ ಅವರು ಭ್ರಷ್ಟಾಚಾರ ನಡೆಸಿದ್ದಾರೆ ಎನ್ನುವ ಕುರಿತು ಸಿಬಿಐ ಕಳೆದ ಏಳು ವರ್ಷಗಳಿಂದ ವಿಚಾರಣೆ ನಡೆಸುತ್ತಿತ್ತು. ‘ದೀರ್ಘ ಕಾಲದ ವಿಚಾರಣೆಯ ಬಳಿಕ ಸೈನಿ ಅವರು ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಪುಷ್ಟೀಕರಿಸುವ ಸಾಕ್ಷ್ಯ ದೊರೆತಿಲ್ಲ’ ಎಂದು ಸಿಬಿಐ ಹೇಳಿದೆ.

ಸೈನಿ ಅವರು ವಾಯಪಡೆಯ ನಿವೃತ್ತ ಬ್ರಿಗೆಡಿಯರ್ ಆಗಿದ್ದಾರೆ. 2010ರಲ್ಲಿ ಅವರು ಹೆಲಿಕಾಪ್ಟರ್‌ಗಳ ಪರೀಕ್ಷಾ ತಂಡದ ಮುಖ್ಯಸ್ಥರಾಗಿದ್ದಾಗ, ಅಗಸ್ಟಾ ವೆಸ್ಟ್‌ಲ್ಯಾಂಡ್‌ ಕಂಪನಿಯ ವಿವಿಧ ಹೆಲಿಕಾಪ್ಟರ್‌ಗಳಿಗೆ ಪರೀಕ್ಷೆಯಲ್ಲಿ ಭಾಗವಹಿಸಲು ಅನುಮತಿ ನೀಡಿದ್ದರು. ನಂತರ, 2010ರ ಫೆ. 3ರಂದು ಅಗಸ್ಟಾ ವೆಸ್ಟ್‌ಲ್ಯಾಂಡ್‌ ಕಂಪನಿಯ ಹೆಲಿಕಾಪ್ಟರ್‌ ಪರವಾಗಿ ಯುದ್ಧೋಪಕರಣ ನಿರ್ದೇಶನಾಲಯಕ್ಕೆ ಪತ್ರ ಬರೆದಿದ್ದರು.

ಹೀಗೆ ಪತ್ರ ಬರೆಯಲು, ಮಧ್ಯವರ್ತಿ ಕ್ರಿಶ್ಚಿಯನ್‌ ಮೈಕಲ್‌ ಜೇಮ್ಸ್‌ ಅವರಿಂದ ಲಂಚ ಪಡೆದಿದ್ದರು ಎನ್ನುವ ಆರೋಪ ಸೈನಿ ಅವರ ಮೇಲಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT