ಶುಕ್ರವಾರ, ಜನವರಿ 28, 2022
23 °C

ಎಐಎಡಿಎಂಕೆ ಸಂಯೋಜಕರಾಗಿ ಪನ್ನೀರ್‌ಸೆಲ್ವಂ, ಜಂಟಿ ಸಂಯೋಜಕರಾಗಿ ಪಳನಿಸ್ವಾಮಿ ಆಯ್ಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ: ಎಐಎಡಿಎಂಕೆ ಮುಖಂಡರಾದ ಒ. ಪನ್ನೀರ್‌ಸೆಲ್ವಂ ಅವರು ಪಕ್ಷದ ಸಂಯೋಜಕರಾಗಿ ಹಾಗೂ ಕೆ. ಪಳನಿಸ್ವಾಮಿ ಅವರು ಜಂಟಿ ಸಂಯೋಜಕರಾಗಿ ಸೋಮವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಪಕ್ಷದ ಈ ಎರಡು ಉನ್ನತ ಹುದ್ದೆಗಳಿಗೆ ಪನ್ನೀರ್‌ಸೆಲ್ವಂ ಹಾಗೂ ಪಳನಿಸ್ವಾಮಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಪಕ್ಷದ ಚುನಾವಣಾಧಿಕಾರಿ ಸಿ. ಪೊನ್ನಯ್ಯನ್‌ ಅವರು ಘೋಷಿಸಿದ ಬಳಿಕ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

2017ರಲ್ಲಿ ನಡೆದಿದ್ದ ಪಕ್ಷದ ಸಾಮಾನ್ಯ ಸಭೆಯಲ್ಲೂ ಈ ಇಬ್ಬರು ಮುಖಂಡರು ಇದೇ ಹುದ್ದೆಗಳಿಗೆ ಅವಿರೋಧವಾಗಿ ಆಯ್ಕೆಯಾಗಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು