ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಜಿನಿಯರಿಂಗ್‌ ಶಿಕ್ಷಣದಲ್ಲಿ ಪ್ಲಂಬಿಂಗ್ ಕೋರ್ಸ್

Last Updated 20 ಏಪ್ರಿಲ್ 2022, 11:35 IST
ಅಕ್ಷರ ಗಾತ್ರ

ನವದೆಹಲಿ: ಎಂಜಿನಿಯರಿಂಗ್‌, ವಾಸ್ತುಶಿಲ್ಪ ಶಿಕ್ಷಣ ಸಂಸ್ಥೆಗಳಲ್ಲಿ ‘ಪ್ಲಂಬಿಂಗ್’ ಅನ್ನುಕೋರ್ಸ್‌ ಆಗಿ ಪರಿಚಯಿಸಲು ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಮತ್ತು ಭಾರತೀಯ ಪ್ಲಂಬಿಂಗ್‌ ಅಸೋಸಿಯೇಷನ್ ಒಪ್ಪಂದ ಮಾಡಿಕೊಂಡಿವೆ.

ಎಐಸಿಟಿಇ ಅಧ್ಯಕ್ಷ ಅನಿಲ್ ಡಿ.ಸಹಸ್ರಬುದ್ಧೆ ಮತ್ತು ಐಪಿಎ ರಾಷ್ಟ್ರೀಯ ಅಧ್ಯಕ್ಷ ಗುರ್‌ಮಿಟ್‌ ಸಿಂಗ್‌ ಒಪ್ಪಂದಕ್ಕೆ ಸಹಿ ಹಾಕಿದರು. ಶೇ 80ರಷ್ಟು ಭೌತಿಕ, ಶೇ 20 ಪ್ರಾಯೋಗಿಕ ಅಧ್ಯಯನ ಇರುವಂತೆ ಒಟ್ಟು 50 ಗಂಟೆ ಅವಧಿಯ ಕೋರ್ಸ್ ರೂಪಿಸಲಾಗುತ್ತದೆ.

ಒಪ್ಪಂದದ ಅನುಸಾರ ಎಂಜಿನಿಯರಿಂಗ್‌, ವಾಸ್ತುಶಿಲ್ಪ, ಒಳಾಂಗಣ ವಿನ್ಯಾಸ ಕೋರ್ಸ್‌ ವಿದ್ಯಾರ್ಥಿಗಳು, ಸಿವಿಲ್‌, ಪರಿಸರ ಎಂಜಿನಿಯರಿಂಗ್, ಮೆಕಾನಿಕಲ್ ಎಂಜಿನಿಯರಿಂಗ್, ಒಳಾಂಗಣ ವಿನ್ಯಾಸದ ಪದವಿ ವಿದ್ಯಾರ್ಥಿಗಳು ಪ್ಲಂಬಿಂಗ್ (ನೀರು ಮತ್ತು ಒಳಚರಂಡಿ) ವಿಷಯ ಕುರಿತು ನಾಲ್ಕು ಕ್ರೆಡಿಟ್‌ ಕೋರ್ಸ್ ತೆಗೆದುಕೊಳ್ಳಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT