ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸದರ ಚಿಕಿತ್ಸೆ: ದೆಹಲಿ ಏಮ್ಸ್‌ನಿಂದ ಎಸ್‌ಒಪಿ

Last Updated 20 ಅಕ್ಟೋಬರ್ 2022, 12:35 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭೆ ಹಾಗೂ ರಾಜ್ಯಸಭೆ ಸದಸ್ಯರಿಗೆ ಚಿಕಿತ್ಸಾ ಸೌಲಭ್ಯವನ್ನು ಸುವ್ಯವಸ್ಥಿತಗೊಳಿಸುವುದಕ್ಕಾಗಿ ದೆಹಲಿಯ ಏಮ್ಸ್‌ ಆಸ್ಪತ್ರೆಯು ಪ್ರಮಾಣೀಕೃತ ಕಾರ್ಯಾಚರಣೆ ವಿಧಾನ (ಎಸ್‌ಒಪಿ) ಸಿದ್ಧಪಡಿಸಿದೆ. ಆಸ್ಪತ್ರೆಯ ಈ ನಡೆಗೆ ಕೆಲ ವೈದ್ಯರಿಂದ ವಿರೋಧ ವ್ಯಕ್ತವಾಗಿದೆ.

ಲೋಕಸಭೆ ಸೆಕ್ರೆಟರಿಯೆಟ್‌ನ ಜಂಟಿ ಕಾರ್ಯದರ್ಶಿ ವೈ.ಎಂ.ಕಂದಪಾಲ್‌ ಅವರಿಗೆ ಇತ್ತೀಚೆಗೆ ಪತ್ರ ಬರೆದಿರುವ ದೆಹಲಿ ಏಮ್ಸ್‌ನ ನಿರ್ದೇಶಕ ಎಂ.ಶ್ರೀನಿವಾಸ್‌ ಅವರುಆಸ್ಪತ್ರೆಯ ಹೊರ ರೋಗಿ ವಿಭಾಗಕ್ಕೆ (ಒಪಿಡಿ) ಭೇಟಿ ನೀಡುವ, ತುರ್ತು ಚಿಕಿತ್ಸೆ ಪಡೆಯುವ ಹಾಗೂ ಆಸ್ಪತ್ರೆಗೆ ದಾಖಲಾಗುವ ಸಂಸದರಿಗಾಗಿ ಸಿದ್ಧಪಡಿಸಲಾಗಿರುವ ಎಸ್‌ಒಪಿ ಕುರಿತು ಮಾಹಿತಿ ನೀಡಿದ್ದಾರೆ. ಸಂಸದರೊಂದಿಗೆ ಸಮನ್ವಯ ಸಾಧಿಸುವುದಕ್ಕಾಗಿ ನೋಡೆಲ್‌ ಅಧಿಕಾರಿಯೊಬ್ಬರನ್ನು ನೇಮಿಸಿರುವ ವಿಷಯವನ್ನೂ ಅದರಲ್ಲಿ ಪ್ರಸ್ತಾಪಿಸಿದ್ದಾರೆ.

‘ವೈದ್ಯಕೀಯ ಸೌಕರ್ಯ ಒದಗಿಸುವ ಸಂಬಂಧ ಸಂಸದರೊಂದಿಗೆ ಸಮನ್ವಯ ಸಾಧಿಸುವುದಕ್ಕಾಗಿ ಆಸ್ಪತ್ರೆಯ ಆಡಳಿತ ವಿಭಾಗದ ವೈದ್ಯರು ಆಸ್ಪತ್ರೆಯ ನಿಯಂತ್ರಣ ಕೊಠಡಿಯಲ್ಲಿ ಪಾಳಿಯ ಆಧಾರದಲ್ಲಿ ಕೆಲಸ ಮಾಡಲಿದ್ದಾರೆ. ಸಂಸದರ ಕಚೇರಿ ಸಿಬ್ಬಂದಿಯು ಕರೆ ಮಾಡಿ ವಿಷಯ ತಿಳಿಸಿದರೆ ಅವರು ತಜ್ಞ ವೈದ್ಯರ ಜೊತೆ ಮಾತನಾಡಿ ಭೇಟಿಯ ವ್ಯವಸ್ಥೆ ಮಾಡಲಿದ್ದಾರೆ. ತುರ್ತು ಸಂದರ್ಭಗಳಲ್ಲೂ ಅವರು ಸಂಸದರ ಚಿಕಿತ್ಸೆಗೆ ನೆರವಾಗಲಿದ್ದಾರೆ’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಏಮ್ಸ್‌ನ ಈ ನಿರ್ಧಾರವನ್ನು ಸ್ಥಾನಿಕ ವೈದ್ಯರ ಸಂಘಟನೆಗಳ ಒಕ್ಕೂಟವು (ಎಫ್‌ಒಆರ್‌ಡಿಎ) ಪ್ರಶ್ನಿಸಿದ್ದು, ‘ಸಂಸದರಿಗೆ ವಿಶೇಷ ಸೌಕರ್ಯ ಒದಗಿಸುವುದರಿಂದ ಸಾಮಾನ್ಯ ರೋಗಿಗಳಿಗೆ ತೊಂದರೆಯಾಗಲಿದೆ. ಏಮ್ಸ್‌ನಲ್ಲಿ ‘ವಿಐಪಿ ಸಂಸ್ಕೃತಿ’ ಜಾರಿಗೊಳಿಸಲು ಹೊರಟಿರುವುದು ಖಂಡನಾರ್ಹ’ ಎಂದು ಟೀಕಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT