ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರದಕ್ಷಿಣೆ ವಿರುದ್ಧ ಜಾಗೃತಿಗೆ ಎಐಎಂಪಿಎಲ್‌ಬಿ ಮನವಿ

Last Updated 4 ಮಾರ್ಚ್ 2021, 15:28 IST
ಅಕ್ಷರ ಗಾತ್ರ

ಲಖನೌ: ವರದಕ್ಷಿಣೆ ವಿರುದ್ಧ ಜಾಗೃತಿ ಅಭಿಯಾನ ನಡೆಸುವಂತೆ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ಹಿರಿಯ ಸದಸ್ಯರೊಬ್ಬರು ಇಮಾಮ್‌ ಅವರ ಬಳಿ ಮನವಿ ಮಾಡಿದ್ದಾರೆ.

ಇತ್ತೀಚೆಗೆ ಮುಸ್ಲಿಂ ಮಹಿಳೆಯೊಬ್ಬರು ಗುಜರಾತ್‌ನ ಸಬರಮತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಅವರು ಈ ಕಳಕಳಿ ವ್ಯಕ್ತಪಡಿಸಿದ್ದಾರೆ.

‘ವರದಕ್ಷಿಣೆ ಕಿರುಕುಳದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಆಯೆಷಾ ಆರಿಫ್‌ ಖಾನ್‌ ಸಾವು ಮುಸ್ಲಿಂ ಸಮುದಾಯದಲ್ಲಿ ಕಳವಳ ಉಂಟುಮಾಡಿದೆ. ಹಾಗಾಗಿ ಎಲ್ಲಾ ಮಸೀದಿಯ ಇಮಾಮ್ ಅವರು ಶುಕ್ರವಾರ ಪ್ರಾರ್ಥನೆಯ ಮೊದಲು ಹೆಂಡತಿ ಮತ್ತು ಗಂಡಂದಿರ ಹಕ್ಕು ಮತ್ತು ಕರ್ತವ್ಯಗಳನ್ನು ಸ್ಪಷ್ಟವಾಗಿ ತಿಳಿಸುವಂತೆ ಮನವಿ ಮಾಡುತ್ತಿದ್ದೇವೆ’ ಎಂದು ಖಾಲಿದ್ ರಶೀದ್ ಫರಂಗಿ ಮಹಾಲಿ ಹೇಳಿದ್ದಾರೆ.

‘ವರದಕ್ಷಿಣೆ ಬೇಡಿಕೆ ಇಸ್ಲಾಂ ಕಾನೂನಿನ ವಿರುದ್ಧವಾಗಿದೆ. ಆದರೆ, ಕೆಲವರು ಇಂದಿಗೂ ಇಂತಹ ಇಸ್ಲಾಂ ಮತ್ತು ಮಾನವೀಯ ವಿರೋಧಿ ಧೋರಣೆಯನ್ನು ಅನುಸರಿಸುತ್ತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT