ಬುಧವಾರ, ಫೆಬ್ರವರಿ 8, 2023
17 °C

ಮೂತ್ರ ವಿಸರ್ಜನೆ ಪ್ರಕರಣ| ಪೈಲಟ್‌ ಪರವಾನಗಿ ಅಮಾನತು ವಿಪರೀತದ ಕ್ರಮ: ಏರ್‌ ಇಂಡಿಯಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಪಾನಮತ್ತರಾಗಿದ್ದ ಪ್ರಯಾಣಿಕರೊಬ್ಬರು ಮಹಿಳಾ ಸಹ ‍ಪ್ರಯಾಣಿಕರೊಬ್ಬರ ಮೇಲೆ ವಿಮಾನದಲ್ಲಿ ಮೂತ್ರ ಮಾಡಿದ ಪ್ರಕರಣದ ವಿಚಾರವಾಗಿ, ಆ ವಿಮಾನದ ಪೈಲಟ್‌ನ ಪರವಾನಗಿ ಯನ್ನು ಅಮಾನತು ಮಾಡಿದ ಕ್ರಮವು ‘ವಿಪರೀತದ್ದು’ ಎಂದು ಏರ್ ಇಂಡಿಯಾ ಮಂಗಳವಾರ ಹೇಳಿದೆ.

ಈ ಪ್ರಕರಣವನ್ನು ನಿಭಾಯಿಸಿದ ಬಗೆ ಸರಿಯಿಲ್ಲ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು (ಡಿಜಿಸಿಎ) ಏರ್ ಇಂಡಿಯಾಗೆ ₹ 30 ಲಕ್ಷ ದಂಡ ವಿಧಿಸಿದ್ದು, ಪೈಲಟ್ ಪರವಾನಗಿಯನ್ನು 3 ತಿಂಗಳ ಅವಧಿಗೆ ಅಮಾನತು ಮಾಡಿದೆ.

ಪಿಟಿಐ ವರದಿ: ಏರ್ ಇಂಡಿಯಾ ಕಂಪನಿಯು ವಿಮಾನದಲ್ಲಿ ಮದ್ಯ ಒದಗಿಸುವ ನೀತಿಯಲ್ಲಿ ಬದಲಾವಣೆ ತಂದಿದೆ. ಪರಿಷ್ಕೃತ ನೀತಿ ಅನ್ವಯ, ವಿಮಾನದ ಸಿಬ್ಬಂದಿ ಮದ್ಯ ಕೊಡದ ಹೊರತು, ಪ್ರಯಾಣಿಕರು ತಾವಾಗಿಯೇ ಮದ್ಯ ಸೇವಿಸಲು ಅವಕಾಶ ನೀಡುವಂತಿಲ್ಲ. ಪ್ರಯಾಣಿಕರು ತಾವೇ ತಂದ ಮದ್ಯವನ್ನು ಸೇವಿಸುತ್ತಿದ್ದಾರೆಯೇ ಎಂಬುದನ್ನು ಸಿಬ್ಬಂದಿ ಗಮನಿಸಬೇಕು.

‘ಪ್ರಯಾಣಿಕರಿಗೆ ಹೆಚ್ಚಿನ ಮದ್ಯ ಒದಗಿಸಲು ಜಾಣ್ಮೆಯಿಂದ ನಿರಾಕರಿಸುವುದೂ ಸೇರಿದೆ’
ಎಂದು ನೀತಿಯಲ್ಲಿ ಹೇಳಲಾಗಿದೆ. ‘ಹೊಸ ನೀತಿ ಜಾರಿಗೊಳಿಸಲಾಗಿದೆ’ ಎಂದು ಕಂಪನಿ ವಕ್ತಾರರೊಬ್ಬರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು