ಏರ್ ಇಂಡಿಯಾದ ನಾಲ್ಕು ಬೋಯಿಂಗ್ ವಿಮಾನಗಳ ನೋಂದಣಿ ರದ್ದು

ನವ ದೆಹಲಿ: 2020ರ ಫೆಬ್ರುವರಿಯಿಂದ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದ, ಏರ್ ಇಂಡಿಯಾದ ನಾಲ್ಕು ಬೋಯಿಂಗ್ 747 ಜೆಟ್ ವಿಮಾನಗಳ ನೋಂದಣಿಯನ್ನು ರದ್ದುಗೊಳಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಮಹಾ ನಿರ್ದೇಶಕರು (ಡಿಜಿಸಿಎ) ತಿಳಿಸಿದ್ದಾರೆ.
ಬಹಳ ಹಳೆಯದಾಗಿದ್ದ ಈ ವಿಮಾನಗಳಿಗೆ ಭಾರಿ ಪ್ರಮಾಣದ ಇಂಧನದ ಅಗತ್ಯವಿತ್ತು ಹಾಗೂ ಇವುಗಳ ನಿರ್ವಹಣೆಯೂ ವೆಚ್ಚದಾಯಕವಾಗಿತ್ತು ಎಂದು ಡಿಜಿಸಿಎ ಹೇಳಿದೆ.
ಈ ನಾಲ್ಕು ವಿಮಾನಗಳನ್ನು ಏನು ಮಾಡಲಾಗುತ್ತದೆ ಎಂಬ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.