ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಎಫ್ ಪಶ್ಚಿಮ ಕಮಾಂಡ್‌ನ ಮುಖ್ಯಸ್ಥರಾಗಿ ಪಂಕಜ್‌ ಸಿನ್ಹಾ ಪದಗ್ರಹಣ

Last Updated 1 ಜನವರಿ 2023, 18:17 IST
ಅಕ್ಷರ ಗಾತ್ರ

ನವದೆಹಲಿ: ಏರ್‌ ಮಾರ್ಷಲ್‌ ಪಂಕಜ್‌ ಮೋಹನ್‌ ಸಿನ್ಹಾ ಅವರು ಭಾರತೀಯ ವಾಯುಪ‍ಡೆಯ (ಐಎಎಫ್‌) ಪಶ್ಚಿಮ ಏರ್‌ ಕಮಾಂಡ್‌ನ ಕಮಾಂಡರ್‌ ಇನ್‌ ಚೀಫ್‌ ಆಗಿ ಭಾನುವಾರ ಅಧಿಕಾರ ವಹಿಸಿಕೊಂಡಿದ್ದಾರೆ.

ಏರ್‌ ಮಾರ್ಷಲ್‌ ಎಸ್‌.ಪ್ರಭಾಕರನ್‌ ಅವರ ನಿವೃತ್ತಿಯಿಂದ ತೆರವಾಗಿದ್ದ ಈ ಸ್ಥಾನಕ್ಕೆ ಪಂಕಜ್‌ ನೇಮಕವಾಗಿದ್ದಾರೆ. ಪುಣೆಯ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಪದವೀಧರರಾಗಿರುವ ಪಂಕಜ್‌ ಅವರು 1985ರ ಜೂನ್‌ನಲ್ಲಿ ಫೈಟರ್‌ ಪೈಲಟ್‌ ಆಗಿ ಐಎಎಫ್‌ಗೆ ನಿಯೋಜನೆಗೊಂಡಿದ್ದರು. 37 ವರ್ಷಗಳ ವೃತ್ತಿ ಬದುಕಿನಲ್ಲಿ ಅವರು ಹಲವು ಪ್ರಮುಖ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT