ಶನಿವಾರ, ಅಕ್ಟೋಬರ್ 23, 2021
20 °C

ವಾಯುಪಡೆ ವೈಸ್‌ ಮಾರ್ಷಲ್‌ ಆಗಿ ಸಂದೀಪ್‌ ಸಿಂಗ್‌ ಅಧಿಕಾರ ಸ್ವೀಕಾರ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತೀಯ ವಾಯುಪಡೆಯ ವೈಸ್‌ ಮಾರ್ಷಲ್‌ ಆಗಿ ಸಂದೀಪ್‌ ಸಿಂಗ್‌ ಶುಕ್ರವಾರ ಅಧಿಕಾರ ಸ್ವೀಕರಿಸಿದರು. 27ನೇ ಚೀಫ್ ಮಾರ್ಷಲ್‌ ಆಗಿ ವಿ.ಆರ್.ಚೌಧರಿ ಅಧಿಕಾರ ಸ್ವೀಕರಿಸಿದ ಬಳಿಕ ತೆರವಾದ ಸ್ಥಾನದಲ್ಲಿ ಸಿಂಗ್ ಅಧಿಕಾರ ವಹಿಸಿಕೊಂಡರು.

ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಹಿರಿಯ ವಿದ್ಯಾರ್ಥಿಯಾಗಿರುವ ಅವರು ಐಎಎಫ್‌ನ ವಿಮಾನ ಹಾರಾಟ ವಿಭಾಗದಲ್ಲಿ 1983ರಿಂದ ಕಾರ್ಯನಿರ್ವಹಿಸುತ್ತಿದ್ದು, ಯುದ್ಧ ವಿಮಾನದ ಪೈಲಟ್ ಆಗಿದ್ದಾರೆ. ಒಟ್ಟು 4,400 ಗಂಟೆಗಳ ವಿಮಾನ ಹಾರಾಟ ಅನುಭವ ಹೊಂದಿದ್ದಾರೆ.

38 ವರ್ಷಗಳ ಸೇವಾವಧಿಯಲ್ಲಿ ಏರ್‌ಕ್ರಾಫ್ಟ್‌, ಸಿಸ್ಟಮ್ಸ್‌ ಟೆಸ್ಟಿಂಗ್, ಆಪರೇಷನಲ್‌ ಫೈಟರ್‌ ಸ್ವಾಡ್ರನ್‌ ಆಗಿ ಕಾರ್ಯನಿರ್ವಹಿಸಿದ್ದಾರೆ. ಅತಿ ವಿಶಿಷ್ಟ ಸೇವಾ , ವಿಶಿಷ್ಟ ಸೇವಾ ಪದಕ ಪುರಸ್ಕೃತರೂ ಆಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು