ಗುರುವಾರ , ಜೂನ್ 17, 2021
26 °C

ಐಜ್ವಾಲ್‌ನಲ್ಲಿನ‌ ಪುರುಷರಲ್ಲಿ ಕ್ಯಾನ್ಸರ್‌ ಅಧಿಕ - ಎನ್‌ಸಿಆರ್‌ಪಿ ಅಧ್ಯಯನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಐಜ್ವಾಲ್ : ರಾಷ್ಟ್ರೀಯ ಕ್ಯಾನ್ಸರ್ ನೋಂದಣಿ ಕಾರ್ಯಕ್ರಮದ(ಎನ್‌ಸಿಆರ್‌ಪಿ) ಅಡಿಯಲ್ಲಿ 2012ರಿಂದ 2016ರವರೆಗೆ ನಡೆಸಿರುವ ಅಧ್ಯಯನದ ಪ್ರಕಾರ ದೇಶದಲ್ಲೇ ಮಿಜೋರಾಂ ರಾಜ್ಯದ ಐಜ್ವಾಲ್‌ ಜಿಲ್ಲೆಯ ಪುರುಷರೇ ಅಧಿಕ ಸಂಖ್ಯೆಯಲ್ಲಿ ಕ್ಯಾನ್ಸರ್‌ನಿಂದ ಬಳಲುತ್ತಿರುವುದು ತಿಳಿದುಬಂದಿದೆ. 

ಅಧ್ಯಯನದ ವರದಿಯ ಪ್ರಕಾರ ಐಜ್ವಾಲ್ ಜಿಲ್ಲೆಯಲ್ಲಿ ಒಂದು ಲಕ್ಷ ಜನರಲ್ಲಿ 269 ಮಂದಿಗೆ ಕ್ಯಾನ್ಸರ್‌ ಇರುವುದಾಗಿ ತಿಳಿದುಬಂದಿದೆ. 

ಮೇಘಾಲಯದ ಖಾಸಿ ಜಿಲ್ಲೆ ಮತ್ತು ಅಸ್ಸಾಂನ ಕಾಮರೂಪ್(ಮೆಟ್ರೊ) ಜಿಲ್ಲೆಗಳಲ್ಲೂ ಹೆಚ್ಚು ಕ್ಯಾನ್ಸರ್‌ ಪ್ರಕರಣಗಳು ವರದಿಯಾಗಿವೆ. ಈ ಜಿಲ್ಲೆಗಳಲ್ಲಿ ಕ್ರಮವಾಗಿ ಒಂದು ಲಕ್ಷ ಜನರಲ್ಲಿ 227 ಮಂದಿ ಮತ್ತು 213 ಮಂದಿ ಕ್ಯಾನ್ಸರ್‌ರೋಗ ಬಾಧಿತರಾಗಿದ್ದಾರೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.

ಮಿಜೋರಾಂನಲ್ಲಿ ಒಂದು ಲಕ್ಷ ಜನರ ಪೈಕಿ ಪುರುಷರಲ್ಲಿ 207 ಮತ್ತು ಮಹಿಳೆಯರಲ್ಲಿ 172.3 ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗಿವೆ.

ಅರುಣಾಚಲ ಪ್ರದೇಶದ ಪಪುಂಪರೆ ಜಿಲ್ಲೆಯಲ್ಲಿ ಮಹಿಳೆಯರಿಗೆ ಕ್ಯಾನ್ಸರ್‌ ತಗುಲಿರುವ ಪ್ರಕರಣಗಳು ಹೆಚ್ಚು ವರದಿಯಾಗಿವೆ. ಇಲ್ಲಿ ಒಂದು ಲಕ್ಷ ಜನರಿಗೆ 219 ಮಂದಿಗೆ ಕ್ಯಾನ್ಸರ್‌ ರೋಗ ತಗುಲಿದೆ ಎಂದು ಅಧ್ಯಯನ ಹೇಳಿದೆ. ಐಜ್ವಾಲ್ ಜಿಲ್ಲೆಯಲ್ಲೂ ಒಂದು ಲಕ್ಷ ಜನರ ಪೈಕಿ 214 ಮಹಿಳೆಯರಿಗೆ ಕ್ಯಾನ್ಸರ್‌ ರೋಗ ತಗುಲಿದೆ ಎಂದು ಅಧ್ಯಯನ ವರದಿಯಲ್ಲಿ ಉಲ್ಲೇಖಿಸಲಾಗಿದೆ. 

2012-2016ರ ಅವಧಿಯಲ್ಲಿ ಮಿಜೋರಾಂನಲ್ಲಿ ಒಟ್ಟು 8,059 ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲಿ 3,736 ಮಹಿಳೆಯರಿಗೆ ಈ ರೋಗ ಇರುವುದು ದೃಢಪಟ್ಟಿದೆ. ಅದೇ ಅವಧಿಯಲ್ಲಿ ಐಜ್ವಾಲ್‌ ಜಿಲ್ಲೆಯಲ್ಲಿ ಪತ್ತೆಯಾದ ಕ್ಯಾನ್ಸರ್‌ ಪ್ರಕರಣಗಳ ಸಂಖ್ಯೆ 4,080.  ಈ ರಾಜ್ಯದಲ್ಲಿ ಐದು ಮಂದಿಯಲ್ಲಿ ಒಬ್ಬರು ಕ್ಯಾನ್ಸರ್‌ ರೋಗಬಾಧಿತರಾಗುವ ಸಾಧ್ಯತೆ ಇದೆ ಎಂದು ಅಧ್ಯಯನದಲ್ಲಿ ಎಚ್ಚರಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು