ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹತ್ತು ವರ್ಷಗಳ ಸೆರೆವಾಸ ಅವಧಿ ಪೂರ್ಣಗೊಂಡ ಮಾಜಿ ಸಂಸದ ಅಜಯ್‌ ಚೌಟಾಲ ಬಿಡುಗಡೆ

ಶಿಕ್ಷಕರ ನೇಮಕಾತಿ ಅಕ್ರಮ ಪ್ರಕರಣ
Last Updated 10 ಫೆಬ್ರುವರಿ 2022, 21:01 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಹತ್ತು ವರ್ಷಗಳ ಸೆರೆವಾಸ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮಾಜಿ ಸಂಸದ ಅಜಯ್‌ ಚೌಟಾಲ ಅವರನ್ನು ತಿಹಾರ್‌ ಜೈಲಿನಿಂದ ಗುರುವಾರ ಬಿಡುಗಡೆ ಮಾಡಲಾಯಿತು.

ಹರಿಯಾಣದಲ್ಲಿ ಶಿಕ್ಷಕರ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಜನವರಿ 16, 2013ರಂದು ಜೈಲಿಗೆ ಕಳುಹಿಸಲಾಗಿತ್ತು. ತುರ್ತು ಪರೋಲ್ ಮೇಲೆ ಮೇ 14, 2021ರಿಂದ ಹೊರಗಿದ್ದರು. ಶಿಕ್ಷೆ ಅವಧಿ ಪೂರ್ಣಗೊಂಡ ಕಾರಣ ಜೈಲಿಗೆ ಹಾಜರಾಗಿದ್ದು, ಅಧಿಕೃತವಾಗಿ ಬಿಡುಗಡೆ ಮಾಡಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT