ಗುರುವಾರ , ಡಿಸೆಂಬರ್ 2, 2021
19 °C

ಉತ್ತರ ಪ‍್ರದೇಶ ಚುನಾವಣೆ ಹಿನ್ನೆಲೆ: ಅಖಿಲೇಶ್‌ರನ್ನು ಭೇಟಿಯಾದ ಎಎಪಿ ಮುಖಂಡರು

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಲಖನೌ: ಆಮ್‌ ಆದ್ಮಿ ಪಕ್ಷದ ಮುಖಂಡರಾದ ಸಂಜಯ್‌ ಸಿಂಗ್‌ ಮತ್ತು ದಿಲೀಪ್‌ ಪಾಂಡೆ ಅವರು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್‌ ಯಾದವ್‌ರನ್ನು ಇಂದು(ಬುಧವಾರ) ಭೇಟಿ ಮಾಡಿ ಮೈತ್ರಿಯ ಕುರಿತು ಮಾತುಕತೆ ನಡೆಸಿದ್ದಾರೆ.

ಮುಂದಿನ ವರ್ಷ ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಆ ಹಿನ್ನೆಲೆಯಲ್ಲಿ ಎಎಪಿ ಮತ್ತು ಸಮಾಜವಾದಿ ಪಕ್ಷದ ನಡುವಿನ ಮೈತ್ರಿ ವಿಚಾರವು ಮಹತ್ವ ಪಡೆದುಕೊಂಡಿದೆ. 

ಎಎಪಿ ಮುಖಂಡರ ಜೊತೆಗಿನ ಚಿತ್ರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಅಖಿಲೇಶ್‌ ಯಾದವ್‌, ‘ಬದಲಾವಣೆಗಾಗಿ ಭೇಟಿ' ಎಂದು ಬರೆದುಕೊಂಡಿದ್ದಾರೆ. 

2022ರಲ್ಲಿ ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.

ಈ ಹಿನ್ನೆಲೆಯಲ್ಲಿ ಟ್ವೀಟ್‌ ಮಾಡಿದ್ದ ಅಖಿಲೇಶ್‌ ಯಾದವ್‌, ‘ಉತ್ತರ ಪ್ರದೇಶದಲ್ಲಿ 2022ರಲ್ಲಿ ಕೇವಲ ಚುನಾವಣೆ ನಡೆಯುವುದಿಲ್ಲ. ಬದಲಾಗಿ ನಾಟಕೀಯ ಕ್ರಾಂತಿಯಾಗಲಿದೆ. ವಿಧಾನಸಭಾ ಚುನಾವಣೆಯಲ್ಲಿ 403 ಸ್ಥಾನಗಳ ಪೈಕಿ 350 ಸೀಟುಗಳನ್ನು ಸಮಾಜವಾದಿ ಪಕ್ಷ ಗೆಲ್ಲಲಿದೆ. ಜನರು ಬಿಜೆಪಿಯ ವಿರುದ್ಧ ಇದ್ದಾರೆ’ ಎಂದು ಅವರು ಅಭಿಪ್ರಾಯಪಟ್ಟಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು