ನವದೆಹಲಿ (ಪಿಟಿಐ): ಅಫ್ಗಾನಿಸ್ತಾನದ ಪ್ರಜೆಗಳು ಭಾರತಕ್ಕೆ ಬರಲು ಕಡ್ಡಾಯವಾಗಿ ಇ–ವೀಸಾ ಪಡೆದಿರಬೇಕು ಎಂದು ಕೇಂದ್ರ ಗೃಹ ಸಚಿವಾಲಯ ಬುಧವಾರ ಪ್ರಕಟಿಸಿದೆ. ಅಫ್ಗಾನಿಸ್ತಾನದಲ್ಲಿನ ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.
ಕೇಂದ್ರ ಸರ್ಕಾರವು ಹೊಸದಾದ ‘ಇ–ತುರ್ತು ಎಕ್ಸ್–ಮಿಸ್ಕ್, ವೀಸಾ’ವನ್ನು ಪರಿಚಯಿಸಿದ ಮರು ದಿನವೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಅಫ್ಗನ್‌ನ ಕೆಲವು ಪ್ರಜೆಗಳ ಪಾಸ್‌ಪೋರ್ಟ್‌ಗಳು ಕಳೆದುಹೋಗಿರುವ ಕುರಿತು ಪ್ರಕಟವಾದ ವರದಿಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರವು, ಈ ಹಿಂದೆ ವೀಸಾ ಪಡೆದು ಭಾರತದಲ್ಲಿ ಇಲ್ಲದ ಅಫ್ಗನ್ ಪ್ರಜೆಗಳ ವೀಸಾಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನ್ಯಗೊಳಿಸಿರುವುದಾಗಿ ಘೋಷಿಸಿದೆ.
ಭಾರತಕ್ಕೆ ಪ್ರಯಾಣಿಸಲು ಇಚ್ಚಿಸುವ ಅಫ್ಗನ್ ಪ್ರಜೆಗಳು ಇ–ವೀಸಾಕ್ಕಾಗಿ ಅರ್ಜಿ ಸಲ್ಲಿಸಬಹುದು ಎಂದೂ ಅದು ಹೇಳಿದೆ.
ಅಫ್ಗಾನಿಸ್ತಾನದಲ್ಲಿ ಭಾರತೀಯ ರಾಯಭಾರ ಕಚೇರಿಗಳು ಮುಚ್ಚಿರುವುದರಿಂದ, ವೀಸಾ ಅರ್ಜಿಗಳನ್ನು ನವದೆಹಲಿಯಲ್ಲಿ ಪರಿಶೀಲಿಸಿ, ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಇ–ತುರ್ತು ಎಕ್ಸ್–ಮಿಸ್ಕ್, ವೀಸಾ’ ಆರಂಭದಲ್ಲಿ ಆರು ತಿಂಗಳವರೆಗೆ ಮಾನ್ಯವಾಗಿರುತ್ತದೆ ಎಂದು ಅವರು ಹೇಳಿದ್ದಾರೆ. ಅಫ್ಗಾನಿಸ್ತಾನದ ಯಾವುದೇ ಧರ್ಮದವರು ಇ–ವೀಸಾಗಾಗಿ ಅರ್ಜಿ ಸಲ್ಲಿಸಬಹುದು ಎಂದು ಹೇಳಿದ್ದಾರೆ.
ಇವನ್ನೂ ಓದಿ
*ಅಫ್ಗಾನ್ಬೆಳವಣಿಗೆಗಳ ಬಗ್ಗೆ ಚರ್ಚಿಸಲು ಜಿ7 ಸಭೆ ಕರೆದ ಬ್ರಿಟನ್ ಪ್ರಧಾನಿ ಬೋರಿಸ್
*ಕಾಬೂಲ್: ಬೆದರಿಕೆಯ ನಡುವೆಯೂ ಹೆಚ್ಚಿನ ಜನರನ್ನು ಸ್ಥಳಾಂತರಿಸಿದ ಅಮೆರಿಕ
*ಹತ್ತಾರು ತಾಲಿಬಾನಿಗಳನ್ನು ಕೊಂದು ಪಂಜ್ಶೇರ್ ಪ್ರಾಂತ್ಯ ವಶಕ್ಕೆ ಪಡೆದ ವಿರೋಧಿ ಪಡೆ
*ತೆರವು: ಗಡುವು ಮೀರಿದರೆ ಎಚ್ಚರ
*ಅಫ್ಗಾನಿಸ್ತಾನದಲ್ಲಿ ಮಾನವೀಯತೆಗೆ ಬಹುದೊಡ್ಡ ಸವಾಲು ಎದುರಾಗಲಿದೆ; ಯುನಿಸೆಫ್
*ಅಫ್ಗನ್ಗೆ ಔಷಧ ಪರಿಕರ ಪೂರೈಕೆ ಇನ್ನಷ್ಟು ವಿಳಂಬ
*ತಾಲಿಬಾನ್ ಮೂಲಭೂತವಾದದ ಕಡುವಿರೋಧಿ ಪಾಪ್ ತಾರೆ ಅಫ್ಗಾನಿಸ್ತಾನದಿಂದ ಪಲಾಯನ
*ಅಫ್ಗನ್ ತೊರೆವ ಧಾವಂತ: 7 ಬಲಿ
*ಮಾಜಿ ಅಧ್ಯಕ್ಷ ಅಶ್ರಫ್ ಘನಿ ಅಫ್ಗಾನಿಸ್ತಾನಕ್ಕೆ ಮರಳಬಹುದು: ತಾಲಿಬಾನ್
*ಆಫ್ಗಾನ್ನಿಂದ ಸೇನೆ ಹಿಂತೆಗೆತ ತಾರ್ಕಿಕ ಮತ್ತು ಸರಿಯಾದ ನಿರ್ಧಾರ: ಬೈಡನ್
*ಅಫ್ಗಾನ್ ತಾಲಿಬಾನ್ ವಶವಾಗಲು ಪಾಕ್ ಗುಪ್ತಚರ ಸಂಸ್ಥೆ ಕೈವಾಡ: ಅಮೆರಿಕ ಸಂಸದ
*ಕಾಬೂಲ್ನಿಂದ ಜನರ ಸ್ಥಳಾಂತರ ಪ್ರಕ್ರಿಯೆ ಇನ್ನಷ್ಟು ತ್ವರಿತ: ಜೋ ಬೈಡನ್
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.