ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈವಾಹಿಕ ವ್ಯಾಜ್ಯ ಆಲಿಸಲು ಸುಪ್ರೀಂ ಕೋರ್ಟ್‌ನಿಂದ ಮಹಿಳಾ ನ್ಯಾಯಪೀಠ ರಚನೆ

Last Updated 1 ಡಿಸೆಂಬರ್ 2022, 7:38 IST
ಅಕ್ಷರ ಗಾತ್ರ

ನವದೆಹಲಿ: ಸುಪ್ರೀಂಕೋರ್ಟ್‌ನ ವೈವಾಹಿಕ ವ್ಯಾಜ್ಯಗಳು ಮತ್ತು ಜಾಮೀನು ವಿಷಯಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ವಿಚಾರಣೆ ನಡೆಸಲು ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಬೇಲಾ ಎಂ ತ್ರಿವೇದಿ ಅವರನ್ನೊಳಗೊಂಡ ಮಹಿಳಾ ಪೀಠವನ್ನು ರಚಿಸಿದೆ.

ಪ್ರತಿ ಗುರುವಾರ ಇಂತಹ 10 ಪ್ರಕರಣಗಳನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುವುದಾಗಿ ಈ ಹಿಂದೆ ಸುಪ್ರೀಂಕೋರ್ಟ್‌ ಹೇಳಿತ್ತು. ಅದಕ್ಕಾಗಿ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಕೇವಲ ಮಹಿಳೆಯರನ್ನೇ ಹೊಂದಿರುವ ಈ ಪೀಠವನ್ನು ರಚಿಸಿದ್ದಾರೆ.

ಸರ್ವೋಚ್ಚ ನ್ಯಾಯಾಲಯದ ಇತಿಹಾಸದಲ್ಲಿ ಪೂರ್ತಿ ಮಹಿಳಾ ನ್ಯಾಯಾಧೀಶರಿರುವ ಪೀಠ ರಚನೆಯಾಗುತ್ತಿರುವುದು ಇದು ಮೂರನೇ ಬಾರಿ. ಈ ದ್ವಿಸದಸ್ಯ ಪೀಠವು ಪ್ರಸ್ತುತ ಸುಪ್ರೀಂ ಕೋರ್ಟ್‌ನ ಕೊಠಡಿಸಂಖ್ಯೆ 11 ರಲ್ಲಿ ಕುಳಿತುಕೊಳ್ಳಲಿದೆ. ಜ್ಞಾನ್ ಸುಧಾ ಮಿಶ್ರಾ ಮತ್ತು ರಂಜನಾ ಪ್ರಕಾಶ್ ದೇಸಾಯಿ ಅವರಿದ್ದಮೊದಲ ಸರ್ವ ಮಹಿಳಾ ಪೀಠವನ್ನು 2013 ರಲ್ಲಿ ಸ್ಥಾಪಿಸಿತ್ತು. 2018 ರಲ್ಲಿ ನ್ಯಾಯಮೂರ್ತಿಗಳಾದ ಆರ್ ಭಾನುಮತಿ ಮತ್ತು ಇಂದಿರಾ ಬ್ಯಾನರ್ಜಿ ಅವರ ದ್ವಿಸದಸ್ಯ ಪೀಠವನ್ನು ರಚಿಸಿತ್ತು.

ಪ್ರಸ್ತುತ ಈ ಪೀಠವು ವೈವಾಹಿಕ ವಿವಾದಗಳನ್ನು ಒಳಗೊಂಡ 10 ವರ್ಗಾವಣೆ ಅರ್ಜಿಗಳು ಮತ್ತು 10 ಜಾಮೀನು ಅರ್ಜಿಗಳ ವಿಚಾರಣೆ ನಡೆಸಲಿದೆ. ಈ ಪೀಠದಲ್ಲಿನ ವಿಚಾರಣೆಗಾಗಿ ಒಟ್ಟು 32 ವಿಷಯಗಳನ್ನು ಪಟ್ಟಿಮಾಡಲಾಗಿದೆ.

ಪ್ರಸ್ತುತ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಮೂರ್ತಿ ಕೊಹ್ಲಿ, ಬಿವಿ ನಾಗರತ್ನ ಮತ್ತು ತ್ರಿವೇದಿ ಸೇರಿದಂತೆ ಮೂವರು ಮಹಿಳಾ ನ್ಯಾಯಾಧೀಶರಿದ್ದಾರೆ.

ಸುಪ್ರೀಂ ಕೋರ್ಟ್ ತನ್ನ 34 ನ್ಯಾಯಾಧೀಶ ಬಲಕ್ಕೆ ಪ್ರತಿಯಾಗಿ ಪ್ರಸ್ತುತ ಸಿಜೆಐ ಸೇರಿದಂತೆ 27 ನ್ಯಾಯಾಧೀಶರನ್ನು ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT