ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮರನಾಥ ಯಾತ್ರೆಗೆ ಚಾಲನೆ

Last Updated 29 ಜೂನ್ 2022, 14:20 IST
ಅಕ್ಷರ ಗಾತ್ರ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ಅವರು ಅಮರನಾಥ ಯಾತ್ರೆಗೆ ಬುಧವಾರ ಚಾಲನೆ ನೀಡಿದರು.

43 ದಿನಗಳ ಈ ಯಾತ್ರೆಯು ಇದೇ 30ರಂದು ಆರಂಭವಾಗಲಿದೆ. ಮೊದಲ ಹಂತದಲ್ಲಿಭಗವತಿನಗರ ಶಿಬಿರದ 4,890 ಮಂದಿ ಭಕ್ತರು ಯಾತ್ರೆಗೆ ತೆರಳಲಿದ್ದಾರೆ.

ಭಗವತಿನಗರ ಶಿಬಿರದಿಂದ ಬೆಳಿಗ್ಗೆ ಹೊರಟ ಯಾತ್ರಿಗಳು ಸಂಜೆಪಹಲ್‌ಗಾಂವ್‌ ಮತ್ತು ಬಾಲ್‌ತಲ್‌ ಶಿಬಿರಗಳನ್ನು ತಲುಪಿದ್ದಾರೆ. ಈ ಮಾರ್ಗಗಳ ಮೂಲಕ ಏಕಕಾಲದಲ್ಲಿ ಗುರುವಾರ ಬೆಳಿಗ್ಗೆ ಯಾತ್ರೆ ಹೊರಡಲಿದೆ. ಆಗಸ್ಟ್‌ 11ರಂದು ಕೊನೆಗೊಳ್ಳಲಿದೆ.

‘ಯಾತ್ರೆಯಲ್ಲಿ ಭಾಗಿಯಾಗಿರುವ ಭಕ್ತರ ಮೇಲೆ ಭಯೋತ್ಪಾದಕ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಎಚ್ಚರಿಸಿದೆ. ಹೀಗಾಗಿದಕ್ಷಿಣ ಹಾಗೂ ಕೇಂದ್ರ ಕಾಶ್ಮೀರದ ಗುಡ್ಡಗಾಡು ಪ್ರದೇಶ ಸೇರಿದಂತೆ ಭಕ್ತರು ಸಾಗುವ ಮಾರ್ಗದ ಉದ್ದಕ್ಕೂ ಮೂರು ಹಂತದಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ. ಹೆದ್ದಾರಿಗಳಲ್ಲೂ ಭದ್ರತೆ ಹೆಚ್ಚಿಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT