ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಕೂಲ ಹವಾಮಾನ: ಅಮರನಾಥ ಯಾತ್ರೆ ರದ್ದು

Last Updated 10 ಜುಲೈ 2022, 10:57 IST
ಅಕ್ಷರ ಗಾತ್ರ

ಜಮ್ಮು: ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದಾಗಿ ಪವಿತ್ರ ಅಮರನಾಥ ಕ್ಷೇತ್ರಕ್ಕೆ ಜಮ್ಮುವಿನಿಂದ ಯಾತ್ರೆ ಕೈಗೊಳ್ಳುವುದನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಕ್ಷಿಣ ಕಾಶ್ಮೀರದ ಹಿಮಾಲಯದಲ್ಲಿನ 3,880 ಮೀಟರ್‌ ಎತ್ತರದ ಅಮರನಾಥ ಗುಹಾ ದೇಗುಲಕ್ಕೆ ಕಾಶ್ಮೀರದ ಎರಡು ಬೇಸ್‌ ಕ್ಯಾಂಪ್‌ಗಳಿಂದ ಯಾತ್ರಿಕರ ಹೊಸ ತಂಡಗಳು ಯಾತ್ರೆ ಕೈಗೊಳ್ಳುವಂತಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪವಿತ್ರ ಗುಹೆಯ ಸಮೀಪ ಶುಕ್ರವಾರ ಉಂಟಾದ ದಿಢೀರ್‌ ಪ್ರ‌ವಾಹದಿಂದಾಗಿಶಿಬಿರಗಳಲ್ಲಿ ತಂಗಿದ್ದ ಯಾತ್ರಿಕರಲ್ಲಿ 16 ಜನರು ಮೃತಪಟ್ಟು, ಸುಮಾರು 40 ಮಂದಿ ನಾಪತ್ತೆಯಾಗಿದ್ದಾರೆ.

ವಾರ್ಷಿಕ 43 ದಿನಗಳ ಈ ಯಾತ್ರೆಯು ಜೂನ್‌ 30ರಿಂದ ಕಾಶ್ಮೀರ ಕೇಂದ್ರ ಭಾಗದ ಗಂದೇರ್‌ಬಲ್‌ನಲ್ಲಿರುವ ಬಾಲ್‌ಟಲ್‌ ಮತ್ತು ದಕ್ಷಿಣ ಕಾಶ್ಮೀರದ ಅನಂತ್‌ನಾಗ್‌ನ ನನ್‌ವಾನ್‌–ಪಹಲ್ಗಾಮ್‌ ಬೇಸ್‌ ಕ್ಯಾಂಪ್‌ಗಳಿಂದ ಆರಂಭವಾಗಿತ್ತು. ಸುಮಾರು ಒಂದು ಲಕ್ಷ ಯಾತ್ರಾರ್ಥಿಗಳು ಗುಹೆಗೆ ಭೇಟಿ ನೀಡಿ, ಶಿವನ ಉದ್ಭವ ಹಿಮಲಿಂಗದ ದರ್ಶನ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT