ಸೋಮವಾರ, ಆಗಸ್ಟ್ 15, 2022
22 °C

ಚೀನಾ ಗಡಿಯಲ್ಲಿ ಕಾರ್ಯಾಚರಣೆ: ಭೂಮಿ ನೀಡಲು ಉತ್ತರಾಖಂಡ ಸರ್ಕಾರಕ್ಕೆ ವಾಯುಪಡೆ ಮನವಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಡೆಹ್ರಾಡೂನ್‌: ರಾಜ್ಯದ ಗಡಿ ಭಾಗದಲ್ಲಿ ವಾಯುಪಡೆಯ ಕಾರ್ಯಾಚರಣೆಗೆ ಅನುಕೂಲವಾಗುವಂತೆ ವಿವಿಧ ಸೌಲಭ್ಯಗಳ ಅಳವಡಿಕೆಗಾಗಿ ಭೂಮಿ ನೀಡುವಂತೆ ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್‌ ರಾವತ್‌ ಅವರಿಗೆ ಸೆಂಟ್ರಲ್‌ ಏರ್‌ ಕಮಾಂಡ್‌ನ ಮುಖ್ಯಸ್ಥ ಏರ್‌ ಮಾರ್ಷಲ್‌ ರಾಜೇಶ್‌ಕುಮಾರ್‌ ಮನವಿ ಮಾಡಿದರು.

ನೈಜ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿ ಚೀನಾದೊಂದಿಗೆ ಕಳೆದ ನಾಲ್ಕು ತಿಂಗಳಿನಿಂದಲೂ ಸಂಘರ್ಷ ನಡೆಯುತ್ತಿರುವ ಸಂದರ್ಭದಲ್ಲಿ ವಾಯುಪಡೆಯ ಈ ನಡೆಗೆ ಮಹತ್ವ ಬಂದಿದೆ. ಚೀನಾ ಮತ್ತು ನೇಪಾಳದೊಂದಿಗೆ ಉತ್ತರಾಖಂಡ ಗಡಿ ಹೊಂದಿಕೊಂಡಿದೆ. 

ರಾಜ್ಯದ ಪರ್ವತ ಪ್ರದೇಶಗಳಲ್ಲಿ ರಾಡಾರ್‌ಗಳನ್ನು ಸ್ಥಾಪಿಸುವುದು, ಯುದ್ಧವಿಮಾನಗಳನ್ನು ಇಳಿಸಲು ಅತ್ಯಾಧುನಿಕ ನಿಲ್ದಾಣ ನಿರ್ಮಾಣಕ್ಕೆ ವಾಯುಪಡೆ ಮುಂದಾಗಿದೆ. ಇದಕ್ಕಾಗಿ ರಾಜ್ಯದ ಚಮೋಲಿ, ಪಿತೋರ್‌ಗಡ, ಉತ್ತರಕಾಶಿ ಜಿಲ್ಲೆಗಳ ಪರ್ವತ ಪ್ರದೇಶಗಳಲ್ಲಿ ಕೆಲವು ಸ್ಥಳಗಳನ್ನು ಗುರುತಿಸಲಾಗಿದೆ ಎಂದು ವಾಯುಪಡೆ ಮೂಲಗಳು ಹೇಳಿವೆ.

ಪಂತ್‌ನಗರ, ಜಾಲಿಗ್ರ್ಯಾಂಟ್‌ ಹಾಗೂ ಪಿತೋರ್‌ಗಡಗಳಲ್ಲಿರುವ ವಿಮಾನ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸುವಂತೆಯೂ ಏರ್‌ ಮಾರ್ಷಲ್‌ ರಾಜೇಶ್‌ಕುಮಾರ್ ಮುಖ್ಯಮಂತ್ರಿ ರಾವತ್‌ ಅವರಿಗೆ ಮನವಿ ಮಾಡಿದರು. 

ವಾಯುಪಡೆ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ರಾವತ್‌, ವಾಯುಪಡೆಗೆ ಸೂಕ್ತವೆನಿಸುವ ಜಮೀನು ಹುಡುಕಿ, ಅದರ ಹಸ್ತಾಂತರಕ್ಕೆ ಕ್ರಮ ಕೈಗೊಳ್ಳುವ ಸಲುವಾಗಿ ನೋಡಲ್‌ ಅಧಿಕಾರಿ ನೇಮಕಕ್ಕೆ ಆದೇಶಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು