ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಥಯಾತ್ರೆ ಮೇಲೆ ದಾಳಿ ಮಾಡಿದವರು ಜೈಲಿನಲ್ಲಿದ್ದಾರೆ: ಅಮಿತ್‌ ಶಾ

Last Updated 29 ಮೇ 2022, 16:19 IST
ಅಕ್ಷರ ಗಾತ್ರ

ಅಹಮದಾಬಾದ್‌: ಗುಜರಾತ್‌ನಲ್ಲಿ ರಥಯಾತ್ರೆ ಸಂದರ್ಭದಲ್ಲಿ ದಾಳಿ ಮಾಡಿದವರನ್ನು ಜೈಲಿಗೆ ಕಳುಹಿಸಲಾಯಿತು. ಈಗ ಅವರು ಜೈಲಿನಲ್ಲಿ ‘ಜಗನ್ನಾಥ, ಜಗನ್ನಾಥ‘ ಎಂದು ಜಪಿಸುತ್ತಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

ಗುಜರಾತ್‌ನಲ್ಲಿ 25 ಜಿಲ್ಲೆಗಳಲ್ಲಿ ಪೊಲೀಸರಿಗೆ ವಸತಿ ಹಾಗೂ ಕಚೇರಿ ಸಂಕೀರ್ಣಗಳನ್ನು ಲೋಕಾರ್ಪಣೆ ಮಾಡಿದ ಬಳಿಕ ಅವರು ಮಾತನಾಡಿದರು.

ಕಾಂಗ್ರೆಸ್‌ ಸರ್ಕಾರವಿದ್ದಾಗ ಜಗನ್ನಾಥ ರಥಯಾತ್ರೆಯ ಮೇಲೆ ದಾಳಿ ಮಾಡಿದರು. ಈ ಘಟನೆ ವೇಳೆ ಕಾಂಗ್ರೆಸ್‌ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಯಿತು. ನಂತರ ಬಂದ ನರೇಂದ್ರ ಮೋದಿ ದಾಳಿ ಮಾಡಿದವರನ್ನು ಜೈಲಿಗೆ ಕಳುಹಿಸಿದರು. ಅವರು ಈಗ ಜೈಲಿನಲ್ಲಿ ‘ಜಗನ್ನಾಥ, ಜಗನ್ನಾಥ‘ ಎಂದು ಜಪಿಸುತ್ತಿದ್ದಾರೆ ಎಂದರು.

ನಾನು ಕಾಂಗ್ರೆಸ್‌ ಆಡಳಿತವನ್ನು ನೋಡಿದ್ದೇನೆ, ಹಾಗೇ ಬಿಜೆಪಿ ಆಡಳಿತವನ್ನು ನೋಡಿದ್ದೇನೆ. ರಾಜ್ಯ 25 ವರ್ಷಗಳಲ್ಲಿ ಉತ್ತಮ ಬೆಳವಣಿಗೆ ಕಂಡಿದೆ. ಆದರೆ ಕಾಂಗ್ರೆಸ್‌ ಸರ್ಕಾರ ಕೇವಲ ಕೋಮುಗಲಭೆಯಂತಹ ವಿಚಾರಗಳನ್ನು ಎತ್ತಿ ಜನರ ಮನಸನ್ನು ಕೆಡಿಸುತ್ತಿದೆ ಎಂದು ಅಮಿತ್‌ ಶಾ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT